ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಯು ಕಂಟೇನರ್ ಘಟಕಕ್ಕೆ ಚಾಲನೆ

Last Updated 17 ಜುಲೈ 2021, 20:51 IST
ಅಕ್ಷರ ಗಾತ್ರ

ಯಲಹಂಕ: ‘ಸರ್ಕಾರಿ ಆಸ್ಪತ್ರೆಯಲ್ಲಿ ಆಧುನಿಕ ಉಪಕರಣಗಳನ್ನು ಅಳವಡಿಸಿ, ಮೇಲ್ದರ್ಜೆಗೇರಿಸುವ ಕಾರ್ಯಕ್ಕೆ ಸರ್ಕಾರದಿಂದ ₹3 ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.

ಎಕ್ಸಾನ್ ಮೊಬೈಲ್ ಸರ್ವೀಸರ್ ಆ್ಯಂಡ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಹಯೋಗದಲ್ಲಿ ಸರ್ಕಾರಿ ಆಸ್ಪತ್ರೆಗೆ ದೇಣಿಗೆ ನೀಡಿರುವ ₹35 ಲಕ್ಷ ವೆಚ್ಚದ 5 ಹಾಸಿಗೆಯ ಐಸಿಯು ಕಂಟೇನರ್ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

‘ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ, ಸಿಟಿಸ್ಕ್ಯಾನ್ ಮತ್ತಿತರ ಸೇವೆಗಳಿಗೆ ಅಗತ್ಯವಿರುವ ಹಾಗೂ ಸೌರಶಕ್ತಿ, ಅಗ್ನಿಶಾಮಕ ಸಾಮಗ್ರಿಗಳು ಮತ್ತಿತರ ಸೌಲಭ್ಯಗಳನ್ನು ಒಳಗೊಂಡಂತೆ ಆಧುನಿಕ ಉಪಕರಣ ಅಳವಡಿಸುವ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ’ ಎಂದರು.

‘ನೂತನ ಐಸಿಯು ಕಂಟೇನರ್ ಘಟಕವನ್ನು ಅಗತ್ಯವಿರುವ ಕಡೆಗೆ ಸ್ಥಳಾಂತರಿಸಬಹುದು. ವೆಂಟಿಲೇಟರ್ ಆಗಿಯೂ ಪರಿವರ್ತಿಸಬಹುದು. ಇಂತಹ ಘಟಕಕ್ಕೆ ದೇಣಿಗೆ ನೀಡಿರುವುದು ಶ್ಲಾಘನೀಯ’ ಎಂದರು.

ಸಮರ್ಥನಂ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಮಹಾಂತೇಶ್,‘‌ಐಸಿಯು ಮಾಡ್ಯು ಲರ್ ಮೊಬೈಲ್ ಕಂಟೇನರ್ ಘಟಕವನ್ನು ಎಕ್ಸಾನ್ ಸಂಸ್ಥೆಯ ಸಹಕಾರದಲ್ಲಿ ಅಳವಡಿಸಲಾಗಿದೆ. ಸಂಭಾವ್ಯ ಮೂರನೇ ಅಲೆಯ ಸಂದರ್ಭದಲ್ಲಿ ಹಾಗೂ ನಂತರವೂ ಇದನ್ನು ಬಳಸಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT