ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಚನ ಸಾಹಿತ್ಯ ಈ ನೆಲದ ಪ್ರಜಾಧರ್ಮ’

Last Updated 9 ಡಿಸೆಂಬರ್ 2018, 11:25 IST
ಅಕ್ಷರ ಗಾತ್ರ

ಕನಕಪುರ: ಅರಿವಿನ ವಿಕಾಸವೇ ವ್ಯಕ್ತಿಯ ನಿಜವಾದ ವಿಕಾಸ. ಬಸವಣ್ಣ ಅವರ ವಚನಗಳು ಈ ವಿಕಾಸದ ಹಾದಿಯಲ್ಲಿ ಸಹಕಾರಿಯಾದುದು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ತಿಳಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿ ಆಯೋಜಿಸಿದ್ದ ‘ವಚನಗಳಲ್ಲಿ ವ್ಯಕ್ತಿತ್ವ ವಿಕಸನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವ್ಯಕ್ತಿಯ ತನುಮನಗಳು ಸ್ವಚ್ಛವಾಗಿರಬೇಕು. ಆಗ ಮಾತ್ರ ಆತ ಉತ್ತಮ ವ್ಯಕ್ತಿ ಆಗಲು ಸಾಧ್ಯ ಎಂದರು.

ಶೈಲಜ ಮಸೂತೆ ಮಾತನಾಡಿ, ವಚನ ಸಾಹಿತ್ಯ ಕನ್ನಡ ನೆಲದ ಪ್ರಜಾಧರ್ಮ. ಪ್ರಜೆಗಳಿಂದ ಪ್ರಜೆಗಳಿಗಾಗಿ ರಚಿತವಾದ ಸಾಹಿತ್ಯವೇ ವಚನಸಾಹಿತ್ಯ. ಇದರ ಅರಿವು ಆಚಾರ, ಅನುಭವಗಳಿಂದ ವ್ಯಕ್ತಿ ಹಾಗೂ ರಾಷ್ಟ್ರದ ವಿಕಸನವಾಗುತ್ತದೆ ಎಂದು ಹೇಳಿದರು.

ಪ್ರಾಂಶುಪಾಲ ಶರಣ ನಾಗರಾಜು ಮಾತನಾಡಿದರು.

ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ, ನಿರಂಜನಮೂರ್ತಿ, ಬಸವಜ್ಯೋತಿ ವಚನಗಳನ್ನು ಹಾಡಿದರು. ಸತ್ಯಾನಾರಯಣ, ಸಿದ್ದೇಗೌಡ, ಉಮೇಶ್‌ ಎಚ್‌.ವಿ, ಜಗದೀಶ್‌, ಶ್ರೀನಿವಾಸ ಕೆ.ಆರ್‌, ಪದ್ಮನಾಭ, ಸೌಮ್ಯ, ಮಂಗಳಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT