ಇಂದ್ರಧನುಷ್‌ ಲಸಿಕಾ ಕಾರ್ಯಕ್ರಮ ಆರಂಭ

7
ಒಂಭತ್ತು ರೋಗಗಳ ತಡೆಗೆ ಮಕ್ಕಳು, ಗರ್ಣಿಣಿಯರಿಗೆ ಲಸಿಕೆ

ಇಂದ್ರಧನುಷ್‌ ಲಸಿಕಾ ಕಾರ್ಯಕ್ರಮ ಆರಂಭ

Published:
Updated:

ರಾಮನಗರ: ಮಕ್ಕಳಲ್ಲಿ ಕಾಣಿಸಿಕೊಳ್ಳುವ ಒಂಭತ್ತು ಮಾರಕ ರೋಗಗಳ ತಡೆಗೆ ಶುಕ್ರವಾರದಿಂದ ಎರಡನೇ ಹಂತದ ಇಂದ್ರಧನುಷ್ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಹುಟ್ಟಿನಿಂದ ಈವರೆಗೆ ಪೋಲಿಯೊ, ದಡಾರ ಸೇರಿದಂತೆ ಯಾವುದೇ ರೀತಿಯ ಲಸಿಕೆಗಳನ್ನು ಹಾಕಿಸಿಕೊಳ್ಳದ ಹಾಗೂ ನಿಯಮಿತ ಲಸಿಕೆ ಹಾಕಿಸಿಕೊಳ್ಳದ ಎರಡು ವರ್ಷದೊಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಮಿಷನ್ ಇಂದ್ರಧನುಷ್ ಲಸಿಕೆಯನ್ನು ಆರೋಗ್ಯ ಇಲಾಖೆ ವತಿಯಿಂದ ಉಚಿತವಾಗಿ ಹಾಕಲಾಗುತ್ತದೆ.

‘ಬಾಲಕ್ಷಯ, ಪೋಲಿಯೊ, ಕಾಮಾಲೆ ರೋಗ, ಗಂಟಲುಮಾರಿ, ನಾಯಿಕೆಮ್ಮು, ಧರ್ನುವಾಯು, ಹಿಮೋಫಿಲ್ಸ್ ಬಿ ಇನ್‌ಫ್ಲುಂಜಾ, ಗೊಬ್ಬರ ಹಾಗೂ ಮಿದುಳು ಜ್ವರಗಳಿಂದ ಮಕ್ಕಳನ್ನು ರಕ್ಷಿಸಲು ಇಂದ್ರಧನುಷ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಆರ್‌್ ಸಿಎಚ್ ಅಧಿಕಾರಿ ಡಾ.ಆರ್.ಎನ್. ಲಕ್ಷ್ಮೀಪತಿ ತಿಳಿಸಿದರು.

ಲಸಿಕೆ ವಂಚಿತ ಎರಡು ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರು ಲಸಿಕೆ ಹಾಕಿಸಿಕೊಳ್ಳಬೇಕು. ಇದಕ್ಕಾಗಿ 1500 ಅಂಗನವಾಡಿ ಕಾರ್ಯಕರ್ತೆಯರು, 700 ಆಶಾ ಕಾರ್ಯಕರ್ತೆಯರು, 160 ಜನ ಆರೋಗ್ಯ ಇಲಾಖೆಯ ವಿವಿಧ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ಇಂದ್ರಧನುಷ್ ಅಭಿಯಾನವು ಲಸಿಕಾ ವಂಚಿತ ಮಕ್ಕಳಿಗೆ ಹಾಗೂ ಗರ್ಭೀಣಿಯರಿಗೆ ಸಂಪೂರ್ಣ ಲಸಿಕೆ ನೀಡುವ ಉದ್ದೇಶವನ್ನು ಹೊಂದಿದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ. ಅಮರ್‌ ನಾಥ್‌.

ಅಲೆಮಾರಿಗಳು ವಾಸಿಸುವ ಪ್ರದೇಶ, ಕಟ್ಟಡ ಕಾಮಗಾರಿಗಳು ಇತರ ಪ್ರದೇಶಗಳಲ್ಲಿ ವಿಶೇಷ ಒತ್ತು ನೀಡಿ, ಲಸಿಕಾ ವಂಚಿತ ಮಕ್ಕಳು ಹಾಗೂ ಗರ್ಭೀಣಿಯರಿಗೆ ಇಂಧ್ರಧನುಷ್ ಲಸಿಕೆ ಹಾಕಲಾಗುವುದು. ಯಾವುದೇ ಕಾರಣಕ್ಕೂ ಈ ಮಕ್ಕಳು ಮತ್ತು ಗರ್ಭೀಣಿಯರು ಲಸಿಕೆಯಿಂದ ವಂಚಿತರಾಗದಂತೆ ಸೂಕ್ತ ಕ್ರಮ ವಹಿಸಲಾಗುತ್ತಿದೆ ಎಂದರು.

ಪೋಲಿಯೊದಂತಹ ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ಪೋಷಕರು 2 ವರ್ಷದ ಒಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ಈ ಹಿಂದೆ ಎಷ್ಟೇ ಬಾರಿ ಲಸಿಕೆ ಕೊಡಿಸಿದ್ದರೂ ಸಹ ಮೇಲ್ಕಂಡ ಅವಧಿಯಲ್ಲಿ ಕಡ್ಡಾಯವಾಗಿ ಲಸಿಕೆ ಹಾಕಿಸುಬೇಕು ಎಂದು ಮನವಿ ಮಾಡಿದರು.

* ಶುಕ್ರವಾರದಿಂದ ಇದೇ 18 ರವರೆಗೆ ಎಲ್ಲಾ ಹಂತದ ಸರ್ಕಾರಿ ಆಸ್ಪತ್ರೆಗಳು ಮತ್ತು ಉಪಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆಗಳನ್ನು ಹಾಕಲಾಗುತ್ತದೆ
–ಡಾ.ಆರ್.ಎನ್. ಲಕ್ಷ್ಮೀಪತಿ, ಆರ್‌ಸಿಎಚ್ ಅಧಿಕಾರಿ

* ಅಂಗನವಾಡಿ ಕಾರ್ಯಕರ್ತೆಯರು ಕಡ್ಡಾಯವಾಗಿ ಮಕ್ಕಳನ್ನು, ಗರ್ಭಿಣಿಯರನ್ನು ಲಸಿಕೆ ಹಾಕಿಸಲು ಕರೆದುಕೊಂಡು ಬರಬೇಕು
–ಡಾ.ಟಿ. ಅಮರ್‌ನಾಥ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !