‘ಕೃಷಿಗೆ ಬಾಹ್ಯಾಕಾಶ ತಂತ್ರಜ್ಞಾನದ ಕೊಡುಗೆ ಶ್ಲಾಘನೀಯ’

7
ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ಕುಮಾರ್ ಅಭಿಪ್ರಾಯ

‘ಕೃಷಿಗೆ ಬಾಹ್ಯಾಕಾಶ ತಂತ್ರಜ್ಞಾನದ ಕೊಡುಗೆ ಶ್ಲಾಘನೀಯ’

Published:
Updated:
Prajavani

ಬಿಡದಿ: ಹವಾಮಾನ ವಿಶ್ಲೇಷಣೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಪಾತ್ರ ಮಹತ್ವದ್ದಾಗಿದೆ. ಇದರಿಂದ ಮಳೆ, ಪ್ರವಾಹಗಳ ಮಾಹಿತಿಯು ಸಾಕಷ್ಟು ಮುಂಚೆಯೇ ಸಿಗುತ್ತಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ಕುಮಾರ್ ಹೇಳಿದರು.

ಇಲ್ಲಿನ ಉರಗಳ್ಳಿಯಲ್ಲಿರುವ ನಾಮಧಾರಿ ಸೀಡ್ಸ್‌ ಕಂಪನಿಯಲ್ಲಿ ಶನಿವಾರ ನಡೆದ ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಜನಸಂಖ್ಯೆಗೆ ಅನುಗುಣವಾಗಿ 100 ಉಪಗ್ರಹಗಳ ಅಗತ್ಯವಿದೆ. ಇದರಲ್ಲಿ ಇಸ್ರೋ 40 ಉಪಗ್ರಹಗಳನ್ನು ಉಡಾವಣೆ ಮಾಡಿರುವುದು ಹೆಮ್ಮೆಯ ವಿಚಾರ. ಇದರಿಂದಾಗಿ ಈಚಿನ ದಿನಗಳಲ್ಲಿ ರೈತರಿಗೆ ಹಮಾವಾನ ವೈಪರೀತ್ಯದ ಕುರಿತು ಸಾಕಷ್ಟು ಮುಂಚಿತವಾಗಿಯೇ ತಿಳಿಸುವುದು ಸಾಧ್ಯವಾಗಿದೆ ಎಂದರು.

ಪ್ರೊ. ಮುಕುಂದ ಮಾತನಾಡಿ ಈಚಿನ ದಿನಗಳಲ್ಲಿ ತಂತ್ರಜ್ಞಾನವು ಸಾಕಷ್ಟು ಬೆಳವಣಿಗೆ ಕಂಡಿದೆ. ಇದಕ್ಕೆ ಪೂರ್ವದಲ್ಲಿಯೇ ಸರ್‌ ವಿಶ್ವೇಶ್ವರಯ್ಯ ಅಂತಹವರು ಅಣೆಕಟ್ಟೆ ನಿರ್ಮಿಸಿ ನೀರು ಸಂಗ್ರಹಣೆ ಮಾಡುವ ಮೂಲಕ ದೊಡ್ಡ ಸಾಧನೆಯ್ನೇ ಮಾಡಿದ್ದಾರೆ. ತಂತ್ರಜ್ಞಾನ ಬದಲಾದಂತೆಲ್ಲ ನಮ್ಮ ಬದುಕಿನಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿವೆ ಎಂದರು.

ನಾಮಧಾರಿ ಸೀಡ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಮಾತನಾಡಿ, ರೈತರಿಗೆ ಆಧುನಿಕ ಬೇಸಾಯದ ಬಗ್ಗೆ ಅರಿವು ಮೂಡಿಸುವ ಹಾಗೂ ಸಂವಾದ ಮೂಡಿಸುವ ಕಾರ್ಯಕ್ರಮವನ್ನು ವಿಜ್ಞಾನಿಗಳೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದರು. ಇದೇ ಸಂದರ್ಭ ನಾಮಧಾರಿ ಸೀಡ್ಸ್ ಕುರಿತ ಕಿರುಚಿತ್ರವನ್ನು ಬಿಡುಗಡೆ ಮಾಡಲಾಯಿತು. ಜಿಲ್ಲೆಯ ವಿವಿಧ ಭಾಗಗಳ ರೈತರು ಪಾಲ್ಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !