ಪರಮೇಶ್ ಲಾಕರ್‌ನಲ್ಲಿ ₨ 6 ಕೋಟಿ ಪತ್ತೆ!

ಬುಧವಾರ, ಏಪ್ರಿಲ್ 24, 2019
28 °C

ಪರಮೇಶ್ ಲಾಕರ್‌ನಲ್ಲಿ ₨ 6 ಕೋಟಿ ಪತ್ತೆ!

Published:
Updated:

ಶಿವಮೊಗ್ಗ: ಇಲ್ಲಿನ ಶಂಕರಮಠ ರಸ್ತೆಯ ಶ್ರುತಿ ಮೋಟಾರ್ಸ್‌ ಮಾಲೀಕ, ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರ ಸಂಬಂಧಿ ಡಿ.ಟಿ.ಪರಮೇಶ್ ಅವರಿಗೆ ಸೇರಿದ ಲಾಕರ್‌ನಲ್ಲಿದ್ದ ₨ 6 ಕೋಟಿಯನ್ನು ಗುರುವಾರ ಆದಾಯ ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಶುಕ್ರವಾರ ಬೆಳಿಗ್ಗೆ ಶೋ ರೂಂನಿಂದ ಹೊರಗೆ ಬಂದ ಶ್ರುತಿ ಮೋಟಾರ್ಸ್ ಹಾಗೂ ನೆಕ್ಸಾ ಶೋ ರೂಂ ಸಿಬ್ಬಂದಿ ಆತಂಕದ ಕ್ಷಣಗಳನ್ನು ಎದುರಿಸಿದರು. ಐಟಿ ಅಧಿಕಾರಿಗಳು ಶೋ ರೂಂ ಮೇಲೂ ದಾಳಿ ನಡೆಸಬಹುದು ಎಂಬ ಕಳವಳ ಅವರ ಮುಖದಲ್ಲಿ ವ್ಯಕ್ತವಾಗುತ್ತಿತ್ತು.

‘ಹಲವು ದಿನಗಳಿಂದ ಮಾಲೀಕರು ಶೋ ರೂಂಗೆ ಬಂದಿಲ್ಲ. ಅವರು ಅವ್ಯವಹಾರ ಮಾಡಿರುವ ಸಾಧ್ಯತೆ ಇಲ್ಲ. ಎಲ್ಲ ಆರೋಪಗಳಿಂದ ಮುಕ್ತರಾಗಿ ಬರುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಮಾರುತಿ (ಶ್ರುತಿ ಮೋಟಾರ್ಸ್‌) ಶೂ ರೂಂ ಸಿಬ್ಬಂದಿ ಪ್ರತಿಕ್ರಿಯಿಸಿದರು.

ಅಧಿಕಾರಿಗಳು ಮಾರ್ಚ್‌ 28ರಂದು ಪರಮೇಶ್ ಅವರ ಶರಾವತಿ ನಗರದ ಪರಮೇಶ್ ಅವರ ಮನೆ, ಶೂ ರೂಂಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಆಗ ಲಾಕರ್ ಕೀಗಳು ಸಿಕ್ಕಿರಲಿಲ್ಲ. ಅದರ ಮುಂದುವರಿದ ಭಾಗವಾಗಿ ಮತ್ತೆ ತಪಾಸಣೆ ನಡೆಸಲಾಗಿದೆ. ಎರಡೂ ಲಾಕ್‌ರ್‌ಗಳಲ್ಲಿ ₨ 500 ಹಾಗೂ 2 ಸಾವಿರ ಮುಖಬೆಲೆಯ ನೋಟುಗಳು ಇದ್ದವು ಎಂದು ಮೂಲಗಳು ತಿಳಿಸಿವೆ. ದಾವಣಗೆರೆ ಹಾಗೂ ಚಿಕ್ಕಮಗಳೂರಿನಲ್ಲೂ ಅವರು ಶೂ ರೂಂ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !