ನಿರುದ್ಯೋಗಿಗಳಿಗೆ ಉದ್ಯೋಗ; ದೆಹಲಿಯಲ್ಲಿ ಜಗದೀಶ್‌.ಕೆ ಸನ್ಮಾನ

7

ನಿರುದ್ಯೋಗಿಗಳಿಗೆ ಉದ್ಯೋಗ; ದೆಹಲಿಯಲ್ಲಿ ಜಗದೀಶ್‌.ಕೆ ಸನ್ಮಾನ

Published:
Updated:
Prajavani

ಕನಕಪುರ: ತಾಲ್ಲೂಕಿನ ಕೀರಣಗೆರೆ ಚಾಕಿ ಸಾಕಾಣಿಕೆ ಕೇಂದ್ರದ ಜಗದೀಶ್‌ ಕೆ. ಗ್ರಾಮಾಂತರ ಪ್ರದೇಶದಲ್ಲಿನ ವಿದ್ಯಾವಂತ ಒಂದು ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಟ್ಟಿರುವುದನ್ನು ಕೇಂದ್ರ ಸರ್ಕಾರವು ಗುರುತಿಸಿ ದೆಹಲಿಯಲ್ಲಿನ ವಿಜ್ಙಾನ ಭವನದಲ್ಲಿ ಸನ್ಮಾನಿಸಿ ಗೌರವಿಸಿತು.

ಕೇಂದ್ರದ ಜವಳಿ ಸಚಿವೆ ಸ್ಮೃತಿ ಇರಾನಿ, ವಿದೇಶಾಂಗ ಸಚಿವೆ ಸುಷ್ಮ ಸ್ವರಾಜ್‌, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಜಗದೀಶ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು. ಈಚೆಗೆ ದೆಹಲಿಯ ವಿಜ್ಙಾನ ಭವನದಲ್ಲಿ ಅಭಿನಂದನೆ ಸಮಾರಂಭ ನಡೆಯಿತು.

ಸಂತಸ: ಕುಗ್ರಾಮವೊಂದರಲ್ಲಿ ಚಾಕಿ ಸಾಕಾಣಿಕೆ ಕೇಂದ್ರವನ್ನು ತೆರೆದು, ಅದರ ಮೂಲಕ ರೈತರಿಗೆ ಅನುಕೂಲವಾಗುವಂತೆ ಮತ್ತು ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ ನೀಡಿರುವುದನ್ನು ಗುರುತಿಸಿ ಕೇಂದ್ರ ಸರ್ಕಾರವು ಸನ್ಮಾನಿಸಿರುವುದು ಸಂತಸವನ್ನು ತಂದಿದೆ ಎಂದು ಜಗದೀಶ್‌ ಕೆ. ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !