ಲಕ್ಷ್ಮಿದೇವಿ ಜಾತ್ರಾ ಮಹೋತ್ಸವ

7

ಲಕ್ಷ್ಮಿದೇವಿ ಜಾತ್ರಾ ಮಹೋತ್ಸವ

Published:
Updated:
Deccan Herald

ಮಾಗಡಿ: ಬಲಿಪಾಡ್ಯಮಿ ಅಂಗವಾಗಿ ತಗಚಕುಪ್ಪೆ ಗ್ರಾಮದಲ್ಲಿ ಲಕ್ಷ್ಮಿದೇವಿ ಅಮ್ಮನವರ ಜಾತ್ರಾ ಮಹೋತ್ಸವ ಗುರುವಾರ ಭಕ್ತಾಧಿಗಳ ಸಡಗರ ಸಂಭ್ರಮದ ನಡುವೆ ವೈಭವದಿಂದ ನಡೆಯಿತು.

ಗ್ರಾಮದ ಮುಖಂಡ ನರಸಿಂಹಮೂರ್ತಿ ದೇವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮದಲ್ಲಿ ತಲೆಮಾರಿನಿಂದಲೂ ಬಲಿಂದ್ರರಾಯಸ್ವಾಮಿ ಹಬ್ಬವನ್ನು ಗ್ರಾಮಸ್ಥರೆಲ್ಲರೂ ಸೇರಿಕೊಂಡು ಶ್ರದ್ಧೆಯಿಂದ ಆಚರಿಸಿಕೊಂಡು ಬರುವುದು ವಾಡಿಕೆಯಾಗಿದೆ ಎಂದರು.

ಪುಣ್ಯಕಥೆಯಲ್ಲಿ ಮಹಾವಿಷ್ಣು, ಬಲಿಚಕ್ರವರ್ತಿಯಿಂದ ಮೂರು ಅಡಿ ಭೂಮಿಯನ್ನು ದಾನವಾಗಿ ಬೇಡಿದ ಮಹತ್ವವನ್ನು ಹಿರಿಯರು ಬಲಿಪಾಡ್ಯಮಿ ದಿನ ಕಥೆಯ ರೂಪದಲ್ಲಿ ಹೇಳುತ್ತಿದ್ದರು. ಯುವಜನರಿಗೆ ಬಲಿಪಾಡ್ಯಮಿ ಮಹತ್ವ ತಿಳಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಅಗ್ನಿಶಾಮಕ ದಳದ ಅಧಿಕಾರಿ ನರಸೇಗೌಡ ಮಾತನಾಡಿದರು. ಪದ್ದಮಕ್ಕ ನರಸಿಂಹಮೂರ್ತಿ, ಗೌರಮ್ಮ ಶಿವಕುಮಾರ್‌, ವಸಂತಲಕ್ಷ್ಮಿ, ಲೋಕೇಶ್‌, ಸಿದ್ದಗಂಗಮ್ಮ ಶಂಭಯ್ಯ, ಶಿಕ್ಷಕ ಆನಂದ್‌ ಯಾದವ್‌ ಮಾತನಾಡಿದರು.

ಅರ್ಚಕ ಎಂ.ಚೆನ್ನಪ್ಪ ಪೂಜಾಧಿಗಳನ್ನು ನೆರವೇರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !