ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಲೇಕಮ್ಮ ದೇವಿ ಮಹೋತ್ಸವ ಸಂಪನ್ನ

Last Updated 9 ಅಕ್ಟೋಬರ್ 2019, 20:24 IST
ಅಕ್ಷರ ಗಾತ್ರ

ನಾಲತವಾಡ: ವಿನಾಯಕ ನಗರ ಹಾಗೂ ವೀರೇಶ್ವರ ವೃತ್ತ ಬಡಾವಣೆಯ ಪಿಲೇಕಮ್ಮ ದೇವಿ ಜಾತ್ರಾ ಮಹೋತ್ಸವ ವಿಜಯದಶಮಿ ದಿನವಾದ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ನವರಾತ್ರಿ ಪ್ರಾರಂಭವಾದ ದಿನದಿಂದ 8ನೇ ದಿನದವರೆಗೆ ಪಿಲೇಕಮ್ಮ ದೇವಿಗೆ ಯೋಗಾನಿದ್ರಾ ದುರ್ಗಾ, ದೇವಜಾತಾ ದುರ್ಗಾ, ಮಹಿಷಾಸುರಮರ್ಧಿನಿ ದುರ್ಗಾ, ಶೈಲಜಾ ದುರ್ಗಾ, ಧೂಮ್ರಾಃ ದುರ್ಗಾ, ಚಂಡ–ಮುಂಡ ದುರ್ಗಾ, ರಕ್ತಬೀಜ ದುರ್ಗಾ, ನಿಶುಂಭಾ: ದುರ್ಗಾ ಪೂಜೆಗಳು ನಡೆದಿದ್ದವು.

9ನೇ ದಿನ ಕಟ್ಟಕಟ್ಟಳೆ ಪೂಜೆಗಳ ಜತೆಯಲ್ಲಿ ಶತರುದ್ರಾಭಿಷೇಕ, ಕಲ್ಪೋಕ್ತ ಪೂಜೆ, ಸುಹಾಸಿನಿ ಪೂಜೆ ಹಾಗೂ ಶುಂಭಾ ದುರ್ಗಾ ಪೂಜೆಗಳು ನಡೆದವು. ಮಹಿಳೆಯರು ನಿಂಬೆ ಹಣ್ಣಿನ, ಹಿಟ್ಟಿನ, ಬೆಲ್ಲದ ಆರತಿ ಮಾಡಿದರು. ವಿವಿಧ ಹೂಗಳಿಂದ ಪುಟ್ಟ ಆಲಯವನ್ನು ಅಲಂಕರಿಸಿದ್ದು ಎಲ್ಲರ ಮನಸೂರೆಗೊಂಡಿತು.

ಜೋಡಿ ಮರ ಪೂಜೆ: ಒಂದೇ ಕಡೆ ನಾಟಿರುವ ಅತ್ತಿ ಮರ ಹಾಗೂ ಬೇವಿನ ಮರಗಳಿಗೆ ಹಸಿರು ಸೀರೆ, ಹಸಿರು ಬಳೆ ತೊಡಿಸಿ ಅಲಂಕರಿಸಲಾಯಿತು.

ಗುಂಡು ಸಾಹುಕಾರ ಗಂಗನಗೌಡ್ರ, ಬಸವರಾಜ ಗಡ್ಡಿ, ಮಲ್ಲಿಕಾರ್ಜುನ ಕುಂಬಾರ, ಅಂಬ್ರೇಶ ಕಸಬೇಗೌಡರ, ವಿರೇಶ ಹಳೆಮನಿ, ಶಿವಲಿಂಗಮ್ಮ ಆಲೂರು, ಶಿವಲೀಲಾ ಹಳೆಮನಿ, ಅಕ್ಕಮಹಾದೇವಿ ಗಂಗನಗೌಡರ, ಶಾಂತಮ್ಮ ಗಂಗನಗೌಡರ, ಮಾಹಾನಂದಾ ಕಸಬೇಗೌಡರ, ಬಸಮ್ಮ ಕುಂಬಾರ, ಬೋರಮ್ಮ ಹೂಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT