ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸವಿ ಜಯಂತಿ: ಅದ್ಧೂರಿ ಮೆರವಣಿಗೆ

ಆರ್ಯವೈಶ್ಯ ಸಮಾಜದವರಿಂದ ಸಂಭ್ರಮದ ಆಚರಣೆ
Last Updated 26 ಏಪ್ರಿಲ್ 2018, 12:22 IST
ಅಕ್ಷರ ಗಾತ್ರ

ಕನಕಗಿರಿ: ಪಟ್ಟಣವೂ ಸೇರಿ ಸುತ್ತಮುತ್ತಲಿನ ಗ್ರಾಮಗಳ ಆರ್ಯವೈಶ್ಯ ಸಮಾಜದವರು ಬುಧವಾರ ವಾಸವಿ ಜಯಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.

ವಾಸವಿ ಭಾವಚಿತ್ರಕ್ಕೆ ವಿಶೇಷ ಪೂಜೆ, ಕುಂಕುಮಾರ್ಚನೆ, ಗಂಗೆ ಸ್ಥಳದ ತೆರಳುವ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆದವು.

ವಾಸವಿ ಭಾವಚಿತ್ರದ ಮೆರವಣಿಗೆ ಮಹಿಳೆಯರ ಪೂರ್ಣ ಕುಂಭ, ಕಳಸದೊಂದಿಗೆ ಆರಂಭವಾಯಿತು. ಯಲಬುರ್ಗಿ ತಿಪ್ಪಣ್ಣ ಅವರ ಮನೆಯಿಂದ ಆರಂಭವಾದ ಮೆರವಣಿಗೆ ಮಡಿವಾಳ, ಗಾಣಿಗೇರ ಓಣಿ ಹಾಗೂ ರಾಜಬೀದಿ ಮೂಲಕ ನಗರೇಶ್ವರ ದೇವಸ್ಥಾನ ತಲುಪಿತು.

ನಗರೇಶ್ವರ ದೇವಸ್ಥಾನದಲ್ಲಿ ವಿಠ್ಠಲಾಚಾರ್ಯ ರಾಜಪುರೋಹಿತ ಹುಲಿಹೈದರ ಅವರ ನೇತೃತ್ವದಲ್ಲಿ ತೊಟ್ಟಿಲು ಸೇವೆ, ಪ್ರಸಾದ, ನೈವೇದ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಒಡಪು ಹೇಳುವ ಕಾರ್ಯಕ್ರಮ ನಡೆಯಿತು.

ಆರ್ಯವೈಶ್ಯ ಸಮಾಜದ ಅಧ್ಯಕ್ಷ ಹನುಮೇಶ ಭಕಸ್ತ, ಯುವ ಘಟಕದ ಅಧ್ಯಕ್ಷ ಮಂಜುನಾಥ ಭಕಸ್ತ, ಸಮಾಜದ ಪ್ರಮುಖರಾದ ಲಕ್ಷ್ಮಣ ಭಕಸ್ತ, ತಿಪ್ಪಣ್ಣ ಯಲಬುರ್ಗಿ, ನಾಗಪ್ಪ ಜನಾದ್ರಿ, ಮಹಾಬಳೇಶ್ವರ ಶ್ರೇಷ್ಠಿ, ಪಾಂಡುರಂಗ ಜನಾದ್ರಿ, ವೆಂಕಟೇಶ ಸೌದ್ರಿ, ಹನುಮೇಶ ಯಲಬುರ್ಗಿ, ರಮೇಶಶೆಟ್ಟಿ ಶಿರಿವಾರ. ರಾಘವೇಂದ್ರ ಜನಾದ್ರಿ, ಸಾಗರ ಜನಾದ್ರಿ, ಸಂಜೀವ ಸೌದ್ರಿ, ಹಾಗೂ ಆರ್ಯವೈಶ್ಯ ಸಮಾಜದ ವಾಸವಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ ಪ್ರಮುಖರಾದ ವಿಜಯಲಕ್ಷ್ಮೀ ಜನಾದ್ರಿ, ಕಾವ್ಯ ಶೇಷಗಿರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT