ದೇಶದ ಭವಿಷ್ಯ ಬದಲಿಸುವ ಎಂಜಿನಿಯರ್‌ಗಳು: ಜಕ್ಕನಗೌಡರ್

ಸೋಮವಾರ, ಮೇ 27, 2019
33 °C

ದೇಶದ ಭವಿಷ್ಯ ಬದಲಿಸುವ ಎಂಜಿನಿಯರ್‌ಗಳು: ಜಕ್ಕನಗೌಡರ್

Published:
Updated:
Prajavani

ಶಿವಮೊಗ್ಗ: ಯುವ ಎಂಜಿನಿಯರ್‌ಗಳು ದೇಶದ ಭವಿಷ್ಯ ಬದಲಿಸುವಂತಹ ಹೊಸ ಹೊಸ ಆವಿಷ್ಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಬೆಂಗಳೂರಿನ ಗ್ಲೋಬಲ್ ಎಜ್ ಸಾಫ್ಟ್‌ವೇರ್ ಕಂಪನಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ನಾಗನಗೌಡ ಜಕ್ಕನಗೌಡರ್ ಸಲಹೆ ನೀಡಿದರು.

ಜವಾಹರ್ ಲಾಲ್‌ ನೆಹರು ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಭವಿಷ್ಯದಲ್ಲಿ ಸೂಪರ್‌ಪವರ್ ಭಾರತ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿ ಈಗಾಗಲೇ ದೇಶದ ಚಿತ್ರಣವನ್ನೇ ಬದಲಿಸುತ್ತಿದೆ. ಈ ಕಾರ್ಯದಲ್ಲಿ ಯುವಕರೂ ಕೈಜೋಡಿಸಬೇಕು. ಹೊಸ ಸಂಶೋಧನೆಗಳ ಮೂಲಕ ದೇಶದ ಬಲಷ್ಠಗೊಳಿಸಲು ಅಗತ್ಯ ಸಹಕಾರ ನೀಡಬೇಕು ಎಂದು ಕೋರಿದರು.

ಭಾರತದ ವಿದ್ಯಾರ್ಥಿಗಳು ಸಾಕಷ್ಟು ಪ್ರತಿಭಾವಂತರು. ವಿದೇಶದಲ್ಲಿ ಬೇಡಿಕೆ ಇದೆ. ಅಲ್ಲಿ ಒಳ್ಳೆಯ ವೇತನ ಸಿಗುತ್ತದೆ ಎನ್ನುವ ಒಂದೇ ಕಾರಣಕ್ಕೆ ಪ್ರತಿಭಾ ಪಲಾಯನ ಮಾಡಬಾರದು. ಪ್ರತಿಭೆ ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದರು.

ಈ ಸಮಯದಲ್ಲಿ ಬಿಇ, ಎಂಟೆಕ್, ಎಂಬಿಎ ಮತ್ತು ಎಂಸಿಎಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಆನಂತರ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಜೆಎನ್ಎನ್‌ಸಿಇ ಎಕ್ಸಲೆಂಟ್ ಪ್ರಶಸ್ತಿಯನ್ನು ದಿವ್ಯಾ ಶೆಟ್ಟಿ ಮತ್ತು ಜಾಯ್ ಕಿರಣ್ ಅವರಿಗೆ, ಯುವ ಉದ್ಯಮಿ ಮತ್ತು ಯುವ ಸಂಶೋಧಕ ಪ್ರಶಸ್ತಿ ಕೌಶಿಕ್ ಆರ್. ಉಡುಪ ಮತ್ತು ದೀಪಕ್ ದೊಡ್ಡಮನಿ ಅವರಿಗೆ, ಮೊಹಮ್ಮದ್ ದಾದಾಪಿರ್ ಮತ್ತು ಎಮ್.ಜಿ. ಪೂರ್ಣಿಮಾ ಅವರಿಗೆ ಕಲಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗಣಿತ ವಿಷಯದಲ್ಲಿ 400ಕ್ಕೆ 400 ಅಂಕ ಪಡೆದ ಕೆ.ಆರ್. ರೋಹನ್ ಮತ್ತು 397 ಅಂಕ ಪಡೆದ ಎಚ್.ಪಿ. ವಿದ್ಯಾಶ್ರೀ, ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸಲೀಮ್ ಶೇಖ್ ಅವರನ್ನು ಗೌರವಿಸಲಾಯಿತು.

ಎನ್ಇಎಸ್ ಅಧ್ಯಕ್ಷ ಎ.ಎಸ್. ವಿಶ್ವನಾಥ, ಉಪಾಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಕಾರ್ಯದರ್ಶಿ ಎಸ್.ಎನ್. ನಾಗರಾಜ್, ಖಜಾಂಚಿ ಸಿ.ಆರ್. ನಾಗರಾಜ್, ಎನ್ಇಎಸ್ ಕುಲಸಚಿವ ಪ್ರೊ.ಹೂವಯ್ಯಗೌಡ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ ಎಚ್.ಆರ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !