ಗಾಂಜಾ ಮಾರಿದ್ದ ಆರೋಪಿಗೆ ಶಿಕ್ಷೆ

7

ಗಾಂಜಾ ಮಾರಿದ್ದ ಆರೋಪಿಗೆ ಶಿಕ್ಷೆ

Published:
Updated:

ಶಿವಮೊಗ್ಗ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೊಪ್ಪು ಮಾರಾಟ ಮಾಡಿದ್ದ ಆರೋಪಿಗೆ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ 4 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, 20 ಸಾವಿರ ದಂಡ ವಿಧಿಸಿದೆ.

ಶಿಕಾರಿಪುರ ತಾಲ್ಲೂಕು ಚಿಕ್ಕಕೊರಲಹಳ್ಳಿ ಶೇಖರಪ್ಪ ಶಿಕ್ಷೆಗೆ ಒಳಗಾದ ಆರೋಪಿ.

ಅಂಜನಾಪುರ ಸರ್ಕಲ್ ಬಳಿ 2016ರಲ್ಲಿ ₨ 12 ಸಾವಿರ ಮೌಲ್ಯದ ಗಾಂಜಾ ಸೊಪ್ಪು ಮಾರಾಟ ಮಾಡುವಾಗ ಡಿಸಿಐಬಿ ಅಧಿಕಾರಿಗಳು ಬಂಧಿಸಿದ್ದರು.

ಪ್ರಕರಣದ ವಾದ ಆಲಿಸಿದ ನ್ಯಾಯಾಧೀಶರಾದ ಪ್ರಭಾವತಿ ಎಂ. ಹಿರೇಮಠ್ ಅವರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ವಿ.ಜಿ. ಯಳಗೇರಿ ವಾದ ಮಂಡಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !