ಕೆಎಸ್‌ಎಫ್‌ಸಿ: ₹25.55 ಕೋಟಿ ಲಾಭ

7

ಕೆಎಸ್‌ಎಫ್‌ಸಿ: ₹25.55 ಕೋಟಿ ಲಾಭ

Published:
Updated:

ಕಲಬುರ್ಗಿ: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ)ಯು 2017-18ನೇ ಹಣಕಾಸು ವರ್ಷದಲ್ಲಿ ₹25.55 ಕೋಟಿ ನಿವ್ವಳ ಲಾಭ ಗಳಿಸಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಾಗೂ ಅನಾಣ್ಯೀಕರಣದ ನಡುವೆಯೂ ಉತ್ತಮ ಪ್ರಗತಿ ಕಂಡಿದೆ. ಕರ್ನಾಟಕ ಸರ್ಕಾರದ ನೆರವಿನಿಂದ ₹842.13 ಕೋಟಿ ಸಾಲ ಮಂಜೂರಾತಿ, ₹561.21 ಕೋಟಿ ಸಾಲ ವಿತರಣೆ ಹಾಗೂ ₹781.91 ಕೋಟಿ ಸಾಲ ವಸೂಲಾತಿ ಮಾಡಲಾಗಿದೆ.

ಸಂಸ್ಥೆಯ ವತಿಯಿಂದ ಮಹಿಳಾ ಉದ್ದಿಮೆದಾರರಿಗೆ ₹200.84 ಕೋಟಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಿಮೆದಾರರಿಗೆ ₹269.20 ಕೋಟಿ ಹಾಗೂ ಮೊದಲ ಪೀಳಿಗೆ ಪೀಳಿಗೆ ಉದ್ದಿಮೆದಾರರಿಗೆ ₹77.95 ಕೋಟಿ ಹಣಕಾಸು ನೆರವು ನೀಡಲಾಗಿದೆ.

2018-19ನೇ ಸಾಲಿನಲ್ಲಿ ₹1 ಸಾವಿರ ಕೋಟಿ ಸಾಲ ಮಂಜೂರಾತಿ, ₹800 ಕೋಟಿ ಸಾಲ ವಿತರಣೆ ಹಾಗೂ ₹740 ಕೋಟಿ ಸಾಲ ವಸೂಲಾತಿ ಗುರಿಯನ್ನು ಹೊಂದಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !