‘ಅಪಘಾತದಿಂದ 1.50 ಲಕ್ಷ ಜನ ಸಾವು’

7

‘ಅಪಘಾತದಿಂದ 1.50 ಲಕ್ಷ ಜನ ಸಾವು’

Published:
Updated:

ಕಲಬುರ್ಗಿ: ದೇಶದಲ್ಲಿ ಪ್ರತಿ ವರ್ಷ ಸುಮಾರು 7.50 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಅದರಲ್ಲಿ ಸರಾಸರಿ 1.50 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ಮೂಳೆ ಮತ್ತು ಕೀಲು ತಜ್ಞರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ಬಿ.ಕಾಮರಡ್ಡಿ ಹೇಳಿದರು.

ನಗರದ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್‌)ಯಲ್ಲಿ ಶನಿವಾರ ಏರ್ಪಡಿಸಿದ್ದ ತುರ್ತು ಚಿಕಿತ್ಸೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಡಾ.ಶರಣಬಸವಪ್ಪ ಮಾತನಾಡಿ, ಹದಗೆಟ್ಟ ರಸ್ತೆ, ಅವಸರ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತಗಳು ಸಂಭವಿಸುತ್ತವೆ. ಅಪಘಾತವನ್ನು ಕಡಿಕೆಗೊಳಿಸುವ ಜತೆಗೆ ಸಾರ್ವಜನಿಕರು ಮತ್ತು ವಾಹನ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು. ಅಪಘಾತದ ಸಂದರ್ಭದಲ್ಲಿ ಗಾಯಾಳುಗಳಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ, ಸಮೀಪದ ಆಸ್ಪತ್ರೆಗೆ ದಾಖಲಿಸಬೇಕು ಎಂದು ಸಲಹೆ ನೀಡಿದರು.

ತುರ್ತು ಚಿಕಿತ್ಸೆ ಬಗ್ಗೆ ಡಾ.ಗೌರಿ ಶಂಕರ, ಸಂಚಾರ ನಿಯಮಗಳ ಬಗ್ಗೆ ಹೆಡ್‌ ಕಾನ್‌ಸ್ಟೆಬಲ್ ರಾಜಕುಮಾರ ಕೋಬಾಳ ಉಪನ್ಯಾಸ ನೀಡಿದರು.

ಜಿಮ್ಸ್ ನಿರ್ದೇಶಕ ಡಾ.ಉಮೇಶ ಎಸ್.ಆರ್. ಕಾರ್ಯಕ್ರಮ ಉದ್ಘಾಟಿಸಿದರು. ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಶಿವಕುಮಾರ ಸಿ.ಆರ್., ಎಎಸ್‍ಐ ಶಂಕರ ಬೆಳಮಗಿ, ಡಾ.ಸಚಿನ್ ಶಹಾ, ಡಾ.ವಿಲಾಸಬಾಬು, ಡಾ.ರಮಾಕಾಂತ ಕುಲಕರ್ಣಿ, ಡಾ.ಅಜಯ ಗುಡದೂರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !