‘ಪರಿಶ್ರಮವಿಲ್ಲದೆ ಸಾಧನೆ ಸಾಧ್ಯವಿಲ್ಲ’

7

‘ಪರಿಶ್ರಮವಿಲ್ಲದೆ ಸಾಧನೆ ಸಾಧ್ಯವಿಲ್ಲ’

Published:
Updated:
Deccan Herald

ಕಲಬುರ್ಗಿ: ಜೀವನದಲ್ಲಿ ಪರಿಶ್ರಮ ಪಡದೇ ಯಾವುದನ್ನೂ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ಯುವಜನತೆ ಅಡ್ಡಮಾರ್ಗ ಹಿಡಿಯದೇ ರಾಜ ಮಾರ್ಗದಲ್ಲಿ ಓದಿ ಮುಂದೆ ಬರಬೇಕು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.

ನಗರದ ಶರಣಬಸವೇಶ್ವರ ಶತಮಾನೋತ್ಸವ ಸಭಾಂಗಣದಲ್ಲಿ ಶರಣಬಸವ ವಿಶ್ವವಿದ್ಯಾಲಯದ ವಿವಿಧ ಸ್ನಾತಕ ಪದವಿ ಕೋರ್ಸ್‌ಗಳಲ್ಲಿ ಪ್ರವೇಶ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ಬುನಾದಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗುಣಾತ್ಮಕ ಶಿಕ್ಷಣವನ್ನು ನೀಡಲು ವಿಶ್ವವಿದ್ಯಾಲಯವು ಎಲ್ಲ ರೀತಿಯ ಪರಿಶ್ರಮ ಹಾಕುತ್ತಿದೆ. ಸಂಶೋಧನೆಗೆ ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಯೋಗ, ಧ್ಯಾನದಂತಹ ವಿಷಯಗಳಿಗೆ ಆದ್ಯತೆ ನೀಡಲಾಗಿದೆ. ಶರಣಬಸವಪ್ಪ ಅಪ್ಪ ಅವರ ಸಲಹೆಯಂತೆ ಹತ್ತು ಸಲ ಓದುವುದಕ್ಕಿಂತ ಒಂದು ಸಲ ಬರೆಯುತ್ತ ಓದುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

ಶರಣಬಸವೇಶ್ವರ ಸಂಸ್ಥಾನವು ಅನೇಕ ಶತಮಾನಗಳಿಂದ ದಾಸೋಹ ಕೈಂಕರ್ಯ ಮಾಡುತ್ತ ಬಂದಿದೆ. ಅನ್ನ ದಾಸೋಹದಿಂದ ಪ್ರಾರಂಭವಾದ ಸೇವೆ ಶಿಕ್ಷಣ ದಾಸೋಹವರೆಗೆ ಸಾಗಿ ಬಂದಿದೆ. ನಮ್ಮ ಸಂಸ್ಥೆಯ ಅಡಿಯಲ್ಲಿ 85 ವಿವಿಧ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತ ಈ ಭಾಗದಲ್ಲಿ ಹೆಸರುವಾಸಿಯಾಗಿವೆ ಎಂದು ನುಡಿದರು.

ಕುಲಸಚಿವ ಡಾ.ಅನಿಲ್‌ಕುಮಾರ್ ಬಿಡವೆ, ಸಹ ಕುಲಪತಿ ಡಾ.ವಿ.ಡಿ.ಮೈತ್ರಿ ಮಾತನಾಡಿದರು.

ಡೀನ್ ಡಾ.ಲಿಂಗರಾಜ ಶಾಸ್ತ್ರಿ, ಡಾ.ಎಸ್.ಜಿ.ಡೊಳ್ಳೆಗೌಡರ, ಡಾ.ಲಕ್ಷ್ಮಿ ಪಾಟೀಲ, ಡಾ.ಕಿರಣ ಮಾಕಾ, ಡಾ.ನಾಗಬಸವಣ್ಣ, ಡಾ.ಗೀತಾ ಹರವಾಳ, ಪ್ರೊ.ವಾಣಿಶ್ರೀ ಇದ್ದರು.

ಮೌಲ್ಯಮಾಪನ ಕುಲಸಚಿವ ಡಾ.ಶಿವದತ್ತ ಹೊನ್ನಳ್ಳಿ ಸ್ವಾಗತಿಸಿದರು. ಪ್ರೊ.ಶಿವುಕುಮಾರ ಕಾಗಿ ನಿರೂಪಿಸಿ, ರಾಮಕೃಷ್ಣ ರೆಡ್ಡಿ ವಂದಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !