ಕಲಬುರ್ಗಿ ಉಪ ರಾಜಧಾನಿ ಮಾಡಲು ಮನವಿ

7

ಕಲಬುರ್ಗಿ ಉಪ ರಾಜಧಾನಿ ಮಾಡಲು ಮನವಿ

Published:
Updated:
Deccan Herald

ಕಲಬುರ್ಗಿ: ಬೆಳಗಾವಿ ಬದಲು ಕಲಬುರ್ಗಿಯನ್ನು ಉಪ ರಾಜಧಾನಿಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸದಸ್ಯರು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ತಡಕಲ್ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.

ಹೈದರಾಬಾದ್ ಕರ್ನಾಟಕವು ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಈ ಕಾರಣಕ್ಕಾಗಿಯೇ 371 (ಜೆ) ಕಾಯ್ದೆಯಡಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಉಪ ರಾಜಧಾನಿ ಮಾಡಲು ಭೌಗೋಳಿಕವಾಗಿ ಯೋಗ್ಯವಾದ ಸ್ಥಳವಾಗಿದೆ. ಮಹಾರಾಷ್ಟ್ರದಲ್ಲಿ ವಿದರ್ಭ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿ, ನಾಗಪುರ ಅನ್ನು ಉಪ ರಾಜಧಾನಿಯನ್ನಾಗಿ ಮಾಡಲಾಗಿದೆ. ಅದೇ ರೀತಿ ಕಲಬುರ್ಗಿಯನ್ನು ಉಪ ರಾಜಧಾನಿಯಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಬೆಳಗಾವಿಯನ್ನು ಉಪ ರಾಜಧಾನಿ ಮಾಡಿದರೆ ನಮ್ಮ ಭಾಗದ ಜನರಿಗೆ ಅನುಕೂಲಕ್ಕಿಂತ ಅನನುಕೂಲವಾಗುತ್ತದೆ. ಆದ್ದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೂಡಲೇ ಹೈದರಾಬಾದ್ ಕರ್ನಾಟಕ ಭಾಗದ ಸಚಿವರು, ಸಂಸದರು, ಶಾಸಕರು, ಚಿಂತಕರು ಮತ್ತು ಹೋರಾಟಗಾರರ ಸಭೆಯನ್ನು ಕರೆಯಬೇಕು. ಈ ಬಗ್ಗೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ, ಮನೀಷ್ ಜಾಜು, ಡಾ.ಮಾಜೀದ್ ದಾಗಿ, ಬಸವರಾಜ, ವಿಶಾಲ ಧನೇಕರ್, ಬಾಬಾ ಫಕ್ರುದ್ದೀನ್, ಲಿಂಗರಾಜ ಸಿರಗಾಪುರ, ಮಲ್ಲಿನಾಥ ಸಂಗಶೆಟ್ಟಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !