ಗುರುವಾರ , ಅಕ್ಟೋಬರ್ 17, 2019
26 °C

ಸಿಡಿಲು ಬಡಿದು ದಂಪತಿ ಸಾವು

Published:
Updated:

ಸೇಡಂ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಸೋಂಪಳ್ಳಿಯ ಹೊಲದಲ್ಲಿ ಶುಕ್ರವಾರ ಸಿಡಿಲು ಬಡಿದು ಪತಿ– ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ಸಿಡಿಲಿನ ಹೊಡೆತಕ್ಕೆ ಕೊಂತನಪಲ್ಲಿ ಗ್ರಾಮದ ಖಾಜಾಮಿಯಾ (35), ಅವರ ಪತ್ನಿ ಪರ್ಜಾನಾ (28) ಸಾವನ್ನಪ್ಪಿದರು. ಇದೇ ಊರಿನ ಶಾರದಮ್ಮ, ಪಾರ್ವತಮ್ಮ, ಯಲ್ಲಪ್ಪ, ಆನಂದಪ್ಪ ಅವರಿಗೆ ಗಾಯಗಳಾಗಿವೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೂ ಮಂದಿ ಕಳೆ ತೆಗೆಯಲು ಹೊಲಕ್ಕೆ ಹೋಗಿದ್ದರು. ಮಳೆ ಬಂದ ಕಾರಣ ಮರದ ಆಸರೆಗೆ ನಿಂತಿದ್ದ ವೇಳೆ ಸಿಡಿಲು ಬಡಿದಿದೆ ಎಂದು ಮುಧೋಳ ಠಾಣೆ ಪೊಲೀಸರು ತಿಳಿಸಿದ್ದಾರೆ.

Post Comments (+)