ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿಬಿ) ನೀಡಿದ ₹2.79 ಕೋಟಿ ಅನುದಾನದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಸ್ಮಾರ್ಟ್ ಕ್ಲಾಸ್‌ಗೆ ಸಂಬಂಧಿಸಿದ ಉಪಕರ
ಣಗಳನ್ನು ಖರೀದಿಸುವ ಸಂದರ್ಭದಲ್ಲಿ ರಾಯಚೂರು ವಿಶ್ವವಿದ್ಯಾಲಯವು ಮಾರುಕಟ್ಟೆ ದರಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ದರಕ್ಕೆ ಖರೀದಿಸಿರುವುದು ಬೆಳಕಿಗೆ ಬಂದಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಂಡಳಿಯು ಈ ಸಂಬಂಧ ಪರಿಶೀಲಿಸಿ ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ರಾಯಚೂರು ಜಿಲ್ಲಾಧಿಕಾರಿಗೆ ಸೂಚಿಸಿದೆ.
2022–23ನೇ ಸಾಲಿನಲ್ಲಿ ಸರ್ಕಾರದ ವಿವೇಚನಾ ನಿಧಿ ಅಡಿಯಲ್ಲಿ ರಾಯಚೂರು ವಿಶ್ವವಿದ್ಯಾಲಯಕ್ಕೆ ಸ್ಮಾರ್ಟ್ ಕ್ಲಾಸ್ ರೂಮ್, ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಪೀಠೋಪಕರಣಗಳ ಖರೀದಿಗಾಗಿ ₹9.85 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ ₹7.38 ಕೋಟಿಯನ್ನು ವಿ.ವಿ. ಕುಲಸಚಿವರಿಗೆ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ₹2.79 ಕೋಟಿ ಅನುದಾನವನ್ನು ಬರೀ ಸಿ.ಸಿ.ಟಿ.ವಿ. ಕ್ಯಾಮೆರಾ ಹಾಗೂ ಸ್ಮಾರ್ಟ್ ಟಿ.ವಿ.ಗಳಿಗೆ ಹಾಗೂ ಇದಕ್ಕೆ ಸಂಬಂಧಿಸಿದ ಉಪಕರಣಗಳಿಗೇ ಖರ್ಚು ಮಾಡಲಾಗಿತ್ತು.
ಬೆಂಗಳೂರಿನ ನಂದಿ ಎಂಟರ್‌ಪ್ರೈಸಸ್‌ನಿಂದ 2022ರ ಅಕ್ಟೋಬರ್‌ನಲ್ಲಿ ಉಪಕರಣಗಳನ್ನು ಖರೀದಿಸ
ಲಾಗಿದೆ. ಈ ವಸ್ತುಗಳ ದರಗಳನ್ನು ಆನ್‌ಲೈನ್‌ನಲ್ಲಿ ಮಂಡಳಿಯು ಪರಿಶೀಲಿಸಿದಾಗ ನಾಲ್ಕೈದು ಪಟ್ಟು ಹೆಚ್ಚಿನ ದರಕ್ಕೆ ಖರೀದಿಸಿರುವುದು ಬೆಳಕಿಗೆ ಬಂದಿದೆ ಎಂದು ಮಂಡಳಿ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೀಗಾಗಿ, ಖರೀದಿ ಮಾಡಿದ ಉಪಕರಣ ಪರಿಶೀಲಿಸಿ ವರದಿ ನೀಡಲು ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ಎಲ್. ನಾಯಕ ನೇತೃತ್ವದಲ್ಲಿ ತಂಡವನ್ನು ಕೆಕೆಆರ್‌ಡಿಬಿ ಕಾರ್ಯದರ್ಶಿ ಅನಿರುದ್ಧ ಶ್ರವಣ್ ಅವರು ರಚಿಸಿದ್ದಾರೆ. ತಂಡದಲ್ಲಿ ಮಂಡಳಿಯ ಹಣಕಾಸು ನಿಯಂತ್ರಕ ಸಂತೋಷ್, ಆಂತರಿಕ ಲೆಕ್ಕ ಪರಿಶೋಧಕ ಶೇಖರ್ ಪಟೇಲ್ ಹಾಗೂ ಜಿಲ್ಲಾಧಿಕಾರಿ ನಾಮನಿರ್ದೇಶಿತ ತಾಂತ್ರಿಕ ಅಧಿಕಾರಿ ಇದ್ದಾರೆ.
ಮಿತಿಗಿಂತ ಹೆಚ್ಚಿನ ಮಿತಿಗೆ ಅನುಮೋದನೆ:
ವಿಶ್ವವಿದ್ಯಾಲಯದ ಕುಲಪತಿಯವರು ತಮಗೆ ಅನುಮೋದನೆ ಇರುವ ಮಿತಿಯನ್ನೂ ಮೀರಿ ಹೆಚ್ಚುವರಿ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ₹2.5 ಕೋಟಿ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಬಹುದು. ಆದರೆ, ₹10 ಕೋಟಿಯವರೆಗೂ ವಿ.ವಿ. ಕೆಲಸಗಳಿಗೆ ಅನು
ಮೋದನೆ ನೀಡಿದ್ದಾರೆ. ಹೀಗಾಗಿ, ಗುಲಬರ್ಗಾ ವಿಶ್ವವಿದ್ಯಾಲಯದ ಸ್ಮಾರ್ಟ್ ಕ್ಲಾಸ್ ಮತ್ತಿತರ ಕಾಮಗಾರಿಗಳಿಗೆ ಅನುಮೋದನೆ ನೀಡುವ ಅಧಿಕಾರ ವಿ.ವಿ.ಗೆ ನೀಡಿಲ್ಲ ಎಂದು ಕೆಕೆಆರ್‌ಡಿಬಿ ಅಧಿಕಾರಿ ಮಾಹಿತಿ ನೀಡಿದರು.
ಸಿಸಿಟಿವಿ ಇತರ ಪರಿಕರಗಳನ್ನು ರಾಯಚೂರು ವಿಶ್ವವಿದ್ಯಾಲಯವು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಖರೀದಿ ಮಾಡಿರುವುದು ಕಂಡು ಬಂದಿರುವುದರಿಂದ ಈ ಬಗ್ಗೆ ಪರಿಶೀಲನೆ ನಡೆಸಲು ರಾಯಚೂರು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ
ಅನಿರುದ್ಧ ಶ್ರವಣ್ ಕೆಕೆಆರ್‌ಡಿಬಿ ಕಾರ್ಯದರ್ಶಿ
ಉಪಕರಣ;ಖರೀದಿಸಿದ ಬೆಲೆ;ಮಾರುಕಟ್ಟೆ ಬೆಲೆ ನಂಬರ್ ಪ್ಲೇಟ್ ರಿಕಗ್ನೈಸೇಶನ್ ಕ್ಯಾಮೆರಾ;₹ 188500;₹ 98000 ನೆಟ್‌ವರ್ಕ್ ಪಿಟಿಝಡ್ ಇಮೇಜ್ ಸೆನ್ಸರ್ ಕ್ಯಾಮೆರಾ; ₹ 182680;₹ 40000ದಿಂದ ₹ 70000 64 ಚಾನೆಲ್ ಎನ್‌ವಿಆರ್;₹ 389900; ₹ 50000 65 ಇಂಚಿನ ಅಲ್ಟ್ರಾ ಎಚ್‌ಡಿ ಟಿ.ವಿ;₹ 166950;₹ 36000 ಸ್ಮಾರ್ಟ್ ಅಂಡ್ರಾಯ್ಡ್ ಟಿ.ವಿ.;₹ 64520;₹ 14000 ಐಪಿ ಬುಲೆಟ್ ಕ್ಯಾಮೆರಾ;₹ 26770;₹ 10000
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.