ಭಾನುವಾರ, ಡಿಸೆಂಬರ್ 4, 2022
19 °C

750 ಮೀಟರ್ ಉದ್ದ ತ್ರಿವರ್ಣ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಸೋಮವಾರ ನಾಲ್ಕುಚಕ್ರ ಚಾರಿಟೆಬಲ್ ಟ್ರಸ್ಟ್ ವತಿಯಿಂದ 750 ಮೀಟರ್ ಉದ್ದದ ತಿರಂಗಾ ಮೆರವಣಿಗೆ ನಡೆಯಿತು.

ಶರಣಬಸವೇಶ್ವರ ಸಂಸ್ಥಾನದ ಆವರಣದಲ್ಲಿ ಮೆರವಣಿಗೆಗೆ ಚಾಲನೆ ನೀಡಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಡಾ.ದಾಕ್ಷಾಯಿಣಿ ಎಸ್‌ ಅಪ್ಪ ಮಾತನಾಡಿ, ‘ಯುವಪೀಳಿಗೆಯಲ್ಲಿ ರಾಷ್ಟ್ರಾಭಿಮಾನ ಮೂಡಿಸುವಂತಹ ಇಂತಹ ಮೆರವಣಿಗೆ ನಡೆಸುತ್ತಿರುವುದು ಸಂತಸದ ವಿಷಯ. ಇಂತಹ ಕಾರ್ಯಗಳು ಆಗಾಗ ನಡೆಯಬೇಕು’ ಎಂದರು.

ಸೈನಿಕ ವಿಠಲ್ ವಾಡೆ ಮಾತನಾಡಿ, ‘ದೇಶಕ್ಕಾಗಿ ಬಲಿದಾನ ಮಾಡಿದ ಸ್ವಾತಂತ್ರ್ಯ ವೀರರಿಗೆ ಸ್ಮರಿಸುತ್ತಿರುವುದು ಖುಷಿಯ ವಿಚಾರ’ ಎಂದರು.

ಮೆರವಣಿಗೆಯು ಎಸ್‌ವಿಪಿ ವೃತ್ತ ಹಾಯ್ದು ಜಗತ್ ಸರ್ಕಲ್ ಮಖಾಂತರ ಮತ್ತೆ ದೇವಸ್ಥಾನ ತಲುಪಿತು. ಮಾಶಾಳದ ಸಿದ್ಧಲಿಂಗೇಶ್ವರ ಸಂಸ್ಥಾನದ ಕೇದಾರ ಸ್ವಾಮೀಜಿ, ಡಾ. ಅಪ್ಪಾರಾವ ದೇವಿ ಮಹಾರಾಜ, ಡಾ.ರೇವಣಸಿದ್ದ ಶಿವಾಚಾರ್ಯರು, ಮಹೇಶ್ವರಾನಂದ ಗುರೂಜಿ, ವಿಜಯಮಹಾಂತ ಅಪ್ಪ, ಏಕಡಂಡಿಗಿ ಮಠದ ಸ್ವಾಮೀಜಿ, ಡಾ. ಅಲೋಕ ಪಾಟೀಲ, ಟ್ರಸ್ಟ್‌ನ ಮಾಲಾಕಣ್ಣಿ, ಮಾಲಾ ದಣ್ಣುರ, ಕಲ್ಯಾಣರಾವ ಪಾಟೀಲ, ಮಹೇಶಚಂದ್ರ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು