ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಎಂಟು ಮಂದಿ ಸಾವು

Last Updated 22 ಏಪ್ರಿಲ್ 2021, 4:29 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ‌ 8 ಜನ ನಿಧನರಾಗಿದ್ದಾರೆ ಎಂದು ಬುಧವಾರದ ಅರೋಗ್ಯ ಬುಲೆಟಿನ್ ತಿಳಿಸಿದೆ.

ತೀವ್ರ ಉಸಿರಾಟದ ತೊಂದರೆ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಸರಸ್ವತಿ ಕಾಲೊನಿಯ 67 ವರ್ಷದ ವೃದ್ಧ ಏ 14ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.17ಕ್ಕೆ ನಿಧನರಾದರು. ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯಿಂದ ರಾಜಾಪುರ ಪ್ರದೇಶದ 55 ವರ್ಷದ ಮಹಿಳೆ ಏ.15 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.20ಕ್ಕೆ ಮೃತಪಟ್ಟರು. ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹ ಹಾಗೂ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದ ಜನತಾ ಲೇಔಟ್ ಪ್ರದೇಶದ 79 ವರ್ಷದ ವೃದ್ಧ ಏ.16 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.19ಕ್ಕೆ ನಿಧನರಾಗಿದ್ದಾರೆ. ತೀವ್ರ ಉಸಿರಾಟ ತೊಂದರೆ ಜೊತೆಗೆ‌ ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಜೇವರ್ಗಿ ತಾಲ್ಲೂಕಿನ ಇಟಗಾ ಗ್ರಾಮದ 70 ವರ್ಷದ ವೃದ್ಧೆ ಏ 17ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.19ಕ್ಕೆ ಕೊನೆಯುಸಿರೆಳೆದರು.

ತೀವ್ರ ಉಸಿರಾಟ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ನಗರದ ಘಾಟಗೆ ಲೇಔಟ್ ಪ್ರದೇಶದ 48 ವರ್ಷದ ಮಹಿಳೆ ಏ 15ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.20ಕ್ಕೆ ನಿಧನರಾದರು. ತೀವ್ರ ಉಸಿರಾಟ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಸಂತೋಷ‌ ಕಾಲೋನಿಯ 64 ವರ್ಷದ ವೃದ್ಧ ಏ 15ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ 19ಕ್ಕೆ ಮೃತಪಟ್ಟಿದ್ದಾರೆ.

ತೀವ್ರ ಉಸಿರಾಟ ತೊಂದರೆ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಆಳಂದ ಪಟ್ಟಣದ ಭೀಮ‌ ನಗರದ 38 ವರ್ಷದ ಪುರುಷ ಏ 18ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.21ಕ್ಕೆ ನಿಧನರಾದರು. ತೀವ್ರ ಉಸಿರಾಟ ತೊಂದರೆ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರ್ಗಿಯ ಕೋಟೆ ರಸ್ತೆಯ 73 ವರ್ಷದ ವೃದ್ಧ ಏ 20ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಅಂದೇ ನಿಧನ ಹೊಂದಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿನಿಂದ 399 ಜನ ನಿಧನರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT