ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ: 3 ಗಂಟೆಗಳಲ್ಲಿ‌ 86 ಮಿ.ಮೀ. ದಾಖಲೆ ಮಳೆ 

ಸೇಡಂ ಪೊಲೀಸ್ ಠಾಣೆಗೆ ನುಗ್ಗಿದ ನೀರು
Last Updated 26 ಆಗಸ್ಟ್ 2022, 6:27 IST
ಅಕ್ಷರ ಗಾತ್ರ

ಸೇಡಂ (ಕಲಬುರಗಿ ಜಿಲ್ಲೆ): ಸೇಡಂನಲ್ಲಿ ಗುರುವಾರ ತಡರಾತ್ರಿ ಭಾರಿ ಮಳೆಯಾಗಿದ್ದು, ಪಟ್ಟಣದ ಪೊಲೀಸ್ ಠಾಣೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

ತಡ ರಾತ್ರಿ 1 ಗಂಟೆಗೆ ಆರಂಭಗೊಂಡು 4 ಗಂಟೆಯವರೆಗೆ ಸುರಿದಿದೆ.

ಪಟ್ಟಣದಲ್ಲಿ 86 ಮಿ.ಮೀ. ದಾಖಲೆಯ ಮಳೆ ಸುರಿದಂತಾಗಿದೆ. ಈ ಹಿಂದೆ ಸುರಿದ ಮಳೆ 60 ಮಿ.ಮೀ ಒಳಗಡೆಯೇ ಇತ್ತು. ಆದರೆ ಗುರುವಾರ ತಡರಾತ್ರಿ ಹಾಗೂ ಶುಕ್ರವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಸೇಡಂನ ರಸ್ತೆಗಳು ಜಲಾವೃತವಾಗಿದ್ದವು. ಅಲ್ಲದೆ ಪಟ್ಟಣದ ಚರಂಡಿ ನೀರು ಎಲ್ಲೆಂದರಲ್ಲಿ ಹರಿದು ಬೆಳಿಗ್ಗೆ ಸಂಚಾರಕ್ಕೆ ಕೆಲವು ಬಡಾವಣೆಗಳಲ್ಲಿ ತೊಂದರೆಯುಂಟಾಯಿತು.

ಪಟ್ಟಣದ ಪೊಲೀಸ್ ಠಾಣೆಗೆ ರಾತ್ರಿ ಮಳೆ ನೀರು ನುಗ್ಗಿದ್ದರಿಂದ ಪೊಲೀಸರು ರಾತ್ರಿಯಿಡೀ ದಾಖಲೆ ಪತ್ರಗಳನ್ನು, ಕಂಪ್ಯೂಟರ್‌ ಗಳನ್ನು ರಕ್ಷಿಸುವುದರಲ್ಲಿ ಹರಸಾಹಸ ಪಟ್ಟರು. ಪೊಲೀಸ್ ಇನ್ ಸ್ಪೆಕ್ಟರ್ ಕೊಠಡಿ, ಕಂಪ್ಯೂಟರ್ ಕೊಠಡಿ, ಹೊರಗಡೆ ಕೋಣೆ ಸೇರಿದಂತೆ ಎಲ್ಲಾ ಕೋಣೆಗಳಲ್ಲಿ ಮೊಣಕಾಲುವರೆಗೆ ನೀರು‌ ತುಂಬಿಕೊಂಡಿತ್ತು.

ಠಾಣೆಯಲ್ಲಿರುವ ಪೊಲೀಸರು ಬೆಳಿಗ್ಗೆ ‌ನೀರನ್ನು‌ ಹೊರಹಾಕಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣವೂ ಮಳೆ ನೀರಿನಿಂದ ಜಲಾವೃತಗೊಂಡಿದೆ. ಪಟ್ಟಣದ ಇನ್ಫೊಸಿಸ್ ಕಾಲೊನಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿಯೂ ನೀರು ನಿಂತಿತ್ತು.

ಮಳೆ ವಿವರ: ಸೇಡಂ 86 ಮಿ.ಮೀ, ಆಡಕಿ 20 ಮಿ.ಮೀ, ಮುಧೋಳ 6 ಮತ್ತು ಕೋಡ್ಲಾ 11.6 ಮಿ.ಮೀ ಕಡೆಗಳಲ್ಲಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT