ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿಯಲ್ಲಿ 90 ಸೋಂಕಿತರ ಸ್ಥಿತಿ ಗಂಭೀರ

ಕೋವಿಡ್‌: ಸಿ.ಎಂ ಜತೆ ಜಿಲ್ಲೆಯ ವೈದ್ಯರ ವಿಡಿಯೊ ಸಂವಾದದಲ್ಲಿ ಹೇಳಿಕೆ
Last Updated 16 ಮೇ 2021, 2:39 IST
ಅಕ್ಷರ ಗಾತ್ರ

ಕಲಬುರ್ಗಿ: ‘ಇಲ್ಲಿನ ಜಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 90 ರೋಗಿಗಳು ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ. ಇವರಲ್ಲಿ 60 ರೋಗಿಗಳಿಗೆ ವೆಂಟಿಲೇಟರ್‌ ಮೇಲೆ ಚಿಕಿತ್ಸೆ‌ ನೀಡಲಾಗುತ್ತಿದೆ’ ಎಂದು ಜಿಮ್ಸ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಡಾ.ಜಿ.ಡಿ. ಧನರಾಜ ತಿಳಿಸಿದರು.

ಕೊರೊನಾ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡ ರಾಜ್ಯದ 11 ಸರ್ಕಾರಿ ವೈದ್ಯರ ಜತೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಶನಿವಾರ ವಿಡಿಯೊ ಸಂವಾದ ನಡೆಸಿದರು. ಇದರಲ್ಲಿ ಜಿಲ್ಲೆಯ ಪ್ರತಿನಿಧಿಯಾಗಿ ಪಾಲ್ಗೊಂಡ ಡಾ.ಜಿ.ಡಿ. ಧನರಾಜ ಈ ವಿಷಯ ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು.

‘ಜಿಮ್ಸ್‌ನಲ್ಲಿ 416 ಹಾಸಿಗೆಕೋವಿಡ್ ಸೋಂಕಿತರಿಗೆ‌ ಮೀಸಲಿಡಲಾಗಿದೆ. ಇದರಲ್ಲಿ 101 ಐಸಿಯು, 76 ಎಚ್‌ಡಿಯು ಹಾಗೂ ಉಳಿದವು ಸಾಮಾನ್ಯ ಆಮ್ಲಜನಕದ ಬೆಡ್ ಆಗುವೆ’ ಎಂದರು.

‌‘ಶನಿವಾರದವರೆಗೆ 15,536 ಸಕ್ರಿಯ ಪ್ರಕರಣಗಳಿದ್ದು, ಇದೂವರೆಗೆ 612 ಜನ ಮೃತಪಟ್ಟಿದ್ದಾರೆ. ವಾರದ ಹಿಂದೆ ಆಮ್ಲಜನಕ ಬೆಡ್‌ ಸಮಸ್ಯೆ ಇತ್ತು. ಮೂರು ದಿನದಿಂದ ಸೋಂಕಿನ ತೀವ್ರಗತಿ ಇಳಿಕೆಯಾಗಿದೆ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT