ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ಗೋಶಾಲೆಗಳಲ್ಲಿ 1362 ಜಾನುವಾರು

Last Updated 17 ಸೆಪ್ಟೆಂಬರ್ 2021, 2:52 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ 18 ಖಾಸಗಿ ಗೋಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 1362 ಜಾನುವಾರುಗಳಿಗೆ ಆಶ್ರಯ ನೀಡಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ತಿಳಿಸಿದ್ದಾರೆ.

ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರ ಪ್ರಶ್ನೆಗೆ
ಉತ್ತರ ನೀಡಿದ ಸಚಿವ ಚವ್ಹಾಣ್, ‘ಕಲಬುರ್ಗಿ ಜಿಲ್ಲೆಯ ಸದ್ಗುರು ಸೇವಾಲಾಲ ವಿದ್ಯಾಪೀಠ ಟ್ರಸ್ಟ್, ಉತ್ತರಾದಿಮಠದ ಗೋಶಾಲೆ, ನಂದಿ ಎನಿಮಲ್ ವೆಲ್ಫೇರ್ ಸೊಸೈಟಿ, ಗುರು ದತ್ತ ದಿಗಂಬರ ವೆಂಕಟೇಶ್ವರ ಸೇವಾ ಸಂಘ, ಫ್ಲವರ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್, ಸ್ವಾಮಿ ಸಮರ್ಥ ಸೇವಾ ಕಲ್ಯಾಣ ಕೇಂದ್ರ, ಮಾಧವ ಗೋ ಅನುಸಂಧಾನ ಕೇಂದ್ರ ಟ್ರಸ್ಟ್, ಪುಣ್ಯ ಡಿಎಂಎಸ್‌ ಗೋಶಾಲೆ, ಸಪ್ತಾ ಗೋಪಾರಿಕ್ರಿಯಾ ಗೋಶಾಲೆ, ಆರ್ಯನ್ ಗೋಶಾಲೆ, ಚಂದ್ರಲಾಂಬಿಕಾ ಗೋಶಾಲೆ, ಕಲ್ಯಾನ ನಾಡು ಬಿರಾದಾರ ಸಮುದಾಯ ಮತ್ತು ಸೇವಾ ಸಂಸ್ಥೆ, ಜೈ ರಾಮ ಶಿಕ್ಷಣ ಸಂಸ್ಥೆ, ಶರಣಲಿಂಗ ಮಹಾರಾಜ ಚಾರಿಟಬಲ್ ಟ್ರಸ್ಟ್, ವಿಜಯಭಾರತಿ ಚಾರಿಟಬಲ್ ಟ್ರಸ್ಟ್, ಚಂದ್ರಲಾಂಬಿಕಾ ಗೋಶಾಲೆ, ಕೆಂಚಬಸವೇಶ್ವರ ಜನಕಲ್ಯಾಣ ಟ್ರಸ್ಟ್‌ ಹಾಗೂ ಯಾದಗಿರಿ ಜಿಲ್ಲೆಯ ವಿಶ್ವಮಾತಾ ಗುರುಕುಲ ಗೋಶಾಲೆ ಭಾರತೀಯ ಗೋವಂಶ ಸಂರಕ್ಷಣಾ ಸಮಿತಿ ನಂದಿಬೆಟ್ಟ ಗೋಶಾಲೆಯಲ್ಲಿ ಗೋವುಗಳನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಅವುಗಳ ಪೈಕಿ ಅತಿ ಹೆಚ್ಚು ಜಾನುವಾರುಗಳಿಗೆ ನಂದಿ ಎನಿಮಲ್ ವೆಲ್ಫೇರ್ ಸೊಸೈಟಿ ಗೋಶಾಲೆಯಲ್ಲಿವೆ. ಇದರಲ್ಲಿ 545 ಬರಡು ರಾಸುಗಳು, 1 ಎತ್ತು, ಎಂಟು ಹೋರಿಕರುಗಳಿವೆ ಎಂದು ಸಚಿವರು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT