7
ಕಾರ್ಯನಿರ್ವಾಹಕ ಎಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ

ಅರ್ಧ ಕೆ.ಜಿ ಚಿನ್ನಾಭರಣ ಪತ್ತೆ

Published:
Updated:
ಕಲಬುರ್ಗಿಯ ಎನ್‌ಜಿಒ ಕಾಲೊನಿಯಲ್ಲಿರುವ ಕಾರ್ಯನಿರ್ವಾಹಕ ಎಂಜಿನಿಯರ್ ವೀರಭದ್ರಪ್ಪ ಕಲಗುರ್ಕಿ ಅವರ ಮನೆ

ಕಲಬುರ್ಗಿ: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆಆರ್‌ಐಡಿಎಲ್‌) ಕಾರ್ಯನಿರ್ವಾಹಕ ಎಂಜಿನಿಯರ್‌ ವೀರಭದ್ರಪ್ಪ ಬಿ.ಕಲಗುರ್ಕಿ ಅವರ ಕಚೇರಿ ಹಾಗೂ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಮಂಗಳವಾರ ಏಕಕಾಲಕ್ಕೆ ದಾಳಿ ಮಾಡಿದರು.

ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದಿಸಿರುವ ಆರೋಪದ ಮೇಲೆ ಎನ್‌ಜಿಒ ಕಾಲೊನಿಯಲ್ಲಿರುವ ಮನೆ, ಸೇಡಂ ರಸ್ತೆಯ ಈದ್ಗಾ ಮೈದಾನದ ಎದುರುಗಡೆ ಇರುವ ಕಚೇರಿ ಹಾಗೂ ಅವರ ಪತ್ನಿಯ ಒಡೆತನದಲ್ಲಿರುವ ಎಸ್.ಎಸ್.ಮಲ್ಲಿಕಾರ್ಜುನ ದಾಲ್ ಮಿಲ್‌ ಮೇಲೆ ಬೆಳಿಗ್ಗೆ 6 ಗಂಟೆಗೆ ದಾಳಿ ಮಾಡಿದ ಅಧಿಕಾರಿಗಳು ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.

‘ಎನ್‌ಜಿಒ ಕಾಲೊನಿಯಲ್ಲಿ 60X90 ವಿಸ್ತೀರ್ಣದಲ್ಲಿ ನಿರ್ಮಿಸಿರುವ ಎರಡು ಅಂತಸ್ತಿನ ಸ್ವಂತ ಮನೆ ಇದೆ. 501 ಗ್ರಾಂ ಚಿನ್ನಾಭರಣ, ₹65 ಸಾವಿರ ನಗದು ಪತ್ತೆಯಾಗಿದೆ. ಕಾರ್ಪೋರೇಷನ್‌ ಬ್ಯಾಂಕ್‌ನಲ್ಲಿ ವೀರಭದ್ರಪ್ಪ ಅವರ ಹೆಸರಿನಲ್ಲಿ ₹10 ಲಕ್ಷ ನಿಶ್ಚಿತ ಠೇವಣಿ, ಉಳಿತಾಯ ಖಾತೆಯಲ್ಲಿ ₹3.70 ಲಕ್ಷ, ಪತ್ನಿಯ ಹೆಸರಿನಲ್ಲಿ ಕಾರ್ಪೋರೇಷನ್‌ ಬ್ಯಾಂಕ್‌ ಉಳಿತಾಯ ಖಾತೆಯಲ್ಲಿ ₹2.70 ಲಕ್ಷ, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಲ್ಲಿ ₹2.60 ಲಕ್ಷ ಹಣ ಇಟ್ಟಿದ್ದಾರೆ. ಒಂದು ಕಾರು, ಎರಡು ಸ್ಕೂಟರ್ ಹೊಂದಿದ್ದಾರೆ’ ಎಂದು ಎಸಿಬಿ ಮೂಲಗಳು ತಿಳಿಸಿವೆ.

‘ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಲ್ಲಿ ₹3.10 ಲಕ್ಷ ಮೌಲ್ಯದ ನಿಶ್ಚಿತ ಠೇವಣಿ ಪತ್ರ ದೊರಕಿವೆ. ನಿವೇಶನ ಹಾಗೂ ಜಮೀನಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಮುಂದುವರಿದಿದೆ’ ಎಂಬುದು ಮೂಲಗಳ ವಿವರಣೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !