ಶನಿವಾರ, ಫೆಬ್ರವರಿ 4, 2023
28 °C

ಕಲಬುರಗಿ: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ಆರೋಪಿ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ (ಕಲಬುರಗಿ ಜಿಲ್ಲೆ): ಚಿತ್ತಾಪುರ ತಾಲ್ಲೂಕಿನ ಗ್ರಾಮವೊಂದರಲ್ಲಿ ಶನಿವಾರ ಬೆಳಿಗ್ಗೆ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಯತ್ನಕ್ಕೆ ನಡೆಸಿದ ಆರೋಪಿಯನ್ನು ಸಾರ್ವಜನಿಕರು ಥಳಿಸಿದರು. ನಂತರ ಪೊಲೀಸರಿಗೆ ಒಪ್ಪಿಸಿದರು.

ಇಂಗಳಗಿ ಗ್ರಾಮದ ಕುಮಾರ (35) ಆರೋಪಿಯಾಗಿದ್ದು, ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಆರೋಪಿಯು ಬೆಳಿಗ್ಗೆಯೇ ಬಾಲಕಿಗೆ ಚಾಕ್‌ಲೇಟ್ ಕೊಟ್ಟು, ಆಕೆಯನ್ನು ಪುಸಲಾಯಿಸಿ ತೊಗರಿ ಹೊಲಕ್ಕೆ ಕರೆದೊಯ್ದ. ಅಲ್ಲಿಂದ ಅಳುತ್ತ ಬಂದ ಬಾಲಕಿಯನ್ನು ವಿಚಾರಿಸಿದಾಗ, ಅತ್ಯಾಚಾರ ಯತ್ನ ನಡೆದಿದೆ ಎಂಬ ವಿಷಯ ಗೊತ್ತಾಗಿದೆ. ಸಿಟ್ಟಿಗದ್ದ ಸಾರ್ವಜನಿಕರು ಆರೋಪಿಯನ್ನು ಥಳಿಸಿ, ನಂತರ ನಮ್ಮನ್ನು ಒಪ್ಪಿಸಿದ್ದಾರೆ’ ಎಂದು ವಾಡಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಭೇಟಿ ನೀಡಿ ಪರಿಶೀಲಿಸಿದರು. ‘ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಬಾಲಕಿಯ ವೈದ್ಯಕೀಯ ವರದಿ ಬಂದ ಬಳಿಕ ಸತ್ಯಾಂಶ ಗೊತ್ತಾಗಲಿದೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದರು. ಡಿವೈಎಸ್ಪಿ ಉಮೇಶ್ ಚಿಕ್ಕಮಠ, ಸಿಪಿಐ ಪ್ರಕಾಶ ಯಾತನೂರ ಮತ್ತು ಪಿಎಸ್ಐ ಮಹಾಂತೇಶ ಪಾಟೀಲ ಇದ್ದರು.

‘ಕುಮಾರ (35) ಅತ್ಯಾಚಾರವೆಸಗಿದ ಆರೋಪಿ. ಬೆಳಿಗ್ಗೆಯೇ ಬಾಲಕಿ ಕೈಗೆ ಚಾಕೊಲೇಟ್  ಕೊಟ್ಟು, ಆಕೆಯನ್ನು ಪುಸಲಾಯಿಸಿ ತೊಗರಿ ಹೊಲಕ್ಕೆ ಕರೆದೊಯ್ದ. ಅಲ್ಲಿಂದ ಅಳುತ್ತ ಬಂದ ಬಾಲಕಿಯನ್ನು  ವಿಚಾರಿಸಿದಾಗ, ಘಟನೆ ಬೆಳಕಿಗೆ ಬಂದಿದೆ. ಆರೋಪಿಯು ಕುಡಿದ ಮತ್ತಿನಲ್ಲಿದ್ದ’ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಮಾಹಿತಿ ಆಧಾರದ ಮೇಲೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು