ಅಫಜಲಪುರ ಪುರಸಭೆ: 19ನೇ ವಾರ್ಡ್‌ಗೆ ಚುನಾವಣೆ

7

ಅಫಜಲಪುರ ಪುರಸಭೆ: 19ನೇ ವಾರ್ಡ್‌ಗೆ ಚುನಾವಣೆ

Published:
Updated:

ಕಲಬುರ್ಗಿ: ಅಫಜಲಪುರ ಪುರಸಭೆಯ ವಾರ್ಡ್‌ ನಂ.19ರ ಒಂದು ಸದಸ್ಯ ಸ್ಥಾನದ ಚುನಾವಣೆಗೆ ಜಿಲ್ಲಾ ಚುನಾವಣಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅಧಿಸೂಚನೆ ಹೊರಡಿಸಿದ್ದಾರೆ.

ಈಚೆಗೆ ನಡೆದ ಈ ಪುರಸಭೆ ಚುನಾವಣೆಯಲ್ಲಿ ಈ ವಾರ್ಡ್‌ಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ಹೀಗಾಗಿ ಈ ವಾರ್ಡ್‌ನ ಚುನಾವಣೆ ನಡೆದಿರಲಿಲ್ಲ.

ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಈ ವಾರ್ಡ್‌ಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 16 ಕೊನೆಯ ದಿನ. ಅ.17 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್‌ ಪಡೆಯಲು ಅ.20 ಕೊನೆ ದಿನ. ಅವಶ್ಯವಿದ್ದಲ್ಲಿ ಅ.28ರಂದು ಬೆಳಿಗ್ಗೆ 7 ರಿಂದ ಸಂಜೆ 5ರ ವರೆಗೆ ಮತದಾನ ಹಾಗೂ ಅ. 31ರಂದು ಮತ ಎಣಿಕೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !