ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಫಜಲಪುರ: ಸೊನ್ನ ಭೀಮಾ ಬ್ಯಾರೇಜ್‌ನಿಂದ 1.05 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

Published : 28 ಆಗಸ್ಟ್ 2024, 4:47 IST
Last Updated : 28 ಆಗಸ್ಟ್ 2024, 4:47 IST
ಫಾಲೋ ಮಾಡಿ
Comments

ಅಫಜಲಪುರ: ಮಹಾರಾಷ್ಟ್ರದ ಪುಣೆ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವದರಿಂದ ಉಜನಿ, ವೀರ್ ಜಲಾಶಯಗಳು ಭರ್ತಿಯಾಗಿವೆ. ಈ ಎರಡೂ ಅಣೆಕಟ್ಟೆಗಳಿಂದ 1.45 ಲಕ್ಷ ಕ್ಯುಸೆಕ್‌ ನೀರು ಬಿಟ್ಟಿದ್ದು ಅದರಲ್ಲಿ 1.05 ಲಕ್ಷ ಕ್ಯುಸೆಕ್ಸ್ ನೀರು ಮಂಗಳವಾರ ಬೆಳಗ್ಗೆ ಭೀಮಾ ಜಲಾಶಯ ತಲುಪಿದೆ. 

‘ನದಿ ದಡದ ಗ್ರಾಮಸ್ಥರು, ಕೆಳ ಭಾಗದ ಜನ ಎಚ್ಚರಿಕೆಯಿಂದ ಇರಬೇಕು’ ಎಂದು ತಹಶೀಲ್ದಾರ್ ಸಂಜುಕುಮಾರ ದಾಸರ್ ಹಾಗೂ ಭೀಮಾ ಏತ ನೀರಾವರಿ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸಂತೋಷಕುಮಾರ ಸಜ್ಜನ ತಿಳಿಸಿದ್ದಾರೆ.

ಈ ಕುರಿತು ಪ್ರಜಾವಾಣಿಗೆ ಮಾಹಿತಿ ನೀಡಿದ ಅವರು, ‘ಉಜನಿ ಜಲಾಶಯದಿಂದ 90, ವೀರ ಜಲಾಶಯದಿಂದ 55 ಸಾವಿರ ಕ್ಯುಸೆಕ್ಸ್ ನೀರು ಭೀಮಾ ನದಿಗೆ ಹರಿದು ಬರುತ್ತಿದೆ. 1.05 ಕ್ಯುಸೆಕ್ಸ್ ನೀರು ಸೊನ್ನದ ಭೀಮಾ ಬ್ಯಾರೇಜ್‌ನಲ್ಲಿ ಸಂಗ್ರಹವಾಗುತ್ತಿದ್ದು ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಈವರೆಗೂ ಯಾವುದೇ ಸೇತುವೆಗಳು ಮುಳುಗಡೆಯಾಗಿಲ್ಲ. ಆದರೆ ಮಣ್ಣೂರು ಎಲ್ಲಮ್ಮ ದೇವಿಯ ದೇವಸ್ಥಾನ ಸುತ್ತಲು ನೀರು ಆವರಿಸಿದೆ. ದೇವಸ್ಥಾನದ ಗೇಟ್‌ ಬಂದ್ ಮಾಡಲಾಗಿದೆ. ಯಾರು ದೇವಸ್ಥಾನ ಒಳಗಡೆ ಹೋಗುವ ಸಾಹಸ ಮಾಡಬಾರದು. ಮಹಾರಾಷ್ಟ್ರದ ಜಲಾಶಯಗಳಿಂದ ಬಿಟ್ಟಿರುವ ನೀರು ಬುಧವಾರದವರೆಗೂ ಇನ್ನೂ ಸ್ವಲ್ಪ ಹೆಚ್ಚಳವಾಗಬಹುದು. ಆದರೂ ಯಾವುದೇ ತೊಂದರೆ ಇಲ್ಲ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT