ಅಫಜಲಪುರ: ತಾಲ್ಲೂಕಿನ ಬಳೂರ್ಗಿ ಗ್ರಾಮದಲ್ಲಿ ಸೋಮವಾರ ಸಡಗರ – ಸಂಭ್ರಮದಿಂದ ನಂದಿ ಬಸವೇಶ್ವರ ಪಲ್ಲಕ್ಕಿ, ತೊಟ್ಟಿಲೋತ್ಸವ ಕಾರ್ಯಕ್ರಮ ಜರಗಿತು. ಯುಗಾದಿ ದಿನದಂದೂ ನಂದಿಕೋಲು ಮೆರವಣಿಗೆ ನಡೆಸಿ ಅದನ್ನು ಬಸವೇಶ್ವರ ದೇವಸ್ಥಾನದಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಅಂದಿನಿಂದ ತಿಂಗಳವರೆಗೆ ದೇವಸ್ಥಾನದಲ್ಲಿ ದಿನಾಲೂ ಭಕ್ತರಿಂದ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಪ್ರಸಾದ ವಿತರಣೆ, ಪ್ರತಿ ಮಂಗಳವಾರದ ಸಂಜೆ ಭಜನೆ ನಡೆಯುತ್ತದೆ.

ಏ.19 ರಂದು ಬೆಳಿಗ್ಗೆ 5 ರಿಂದ 6.30ರವರೆಗೆ ಬಸವೇಶ್ವರ ಮೂರ್ತಿಗೆ ಅಭಿಷೇಕ ಸೇವೆ, ರಾತ್ರಿ 8 ರಿಂದ ಬೆಳಿಗ್ಗೆ 1 ಗಂಟೆಯವರೆಗೆ ಬಸವಣ್ಣ ಜನ್ಮತಾಳಿದ ದಿನದಂದು ಕಳಸ ಮೆರವಣಿಗೆ ಏರ್ಪಡಿಸಲಾಗಿತ್ತು.

ಏ.20ರಂದು ಬೆಳಿಗ್ಗೆ 9 ಗಂಟೆಗೆ ನಂದಿಕೋಲು ಮತ್ತು ಪಲ್ಲಕ್ಕಿ ಮೆರವಣಿಗೆ ಜರುಗಿತು. 50ಕ್ಕೂ ಹೆಚ್ಚು ಪುರವಂತರು ಭಾಗವಹಿಸಿ ತಮ್ಮ ಸೇವೆ ಸಲ್ಲಿಸಿದರು. ಪಲ್ಲಕ್ಕಿ ಮತ್ತು ನಂದಿಕೋಲುಗಳಿಗೆ ಮೀಸಲು ನೀರು ಹಾಕಿ ಕಾಯಿ–ಕರ್ಪೂರ ಅರ್ಪಿಸಿದರು. ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ನಂದಿಬಸವೇಶ್ವರರ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು.

ಜಿ.ಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಅವರು ಭಾಗವಹಿಸಿ ದರ್ಶನ ಪಡೆದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಚನ್ನಬಸಪ್ಪ ಚಾಕೊಂಡೆ, ಕಾರ್ಯದರ್ಶಿ ಶ್ರೀಶೈಲ ಪಾಟೀಲ, ಉಪಾಧ್ಯಕ್ಷ ಅರ್ಜುನ್ ಸೋಮಜಾಳ, ಪಲಾಲ ಸಿಂಗ ರಾಠೋಡ, ಹನುಮಯ್ಯ ಗುತ್ತೇದಾರ, ಸುಭಾಷ್ ಗುತ್ತೇದಾರ, ಗೌರಿಶಂಕರ್ ಸ್ಸೊನ್ನ ಸೇರಿದಂತೆ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು. ಭಕ್ತರಿಗಾಗಿ ಪ್ರಸಾದ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-31-681418456

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.