ಅಫಜಲಪುರ: ತಾಲ್ಲೂಕಿನ ಹವಳಗಾ ರೇಣುಕಾ ಸಕ್ಕರೆ ಕಾರ್ಖಾನೆ ದಿನಕ್ಕೆ ಸುಮಾರು ಆರು ಸಾವಿರ ಟನ್ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿದೆ. ಆದರೆ ಸಕ್ಕರೆ ಕಾರ್ಖಾನೆಯಿಂದ ಹೊರಗೆ ಬಿಡಲಾಗುತ್ತಿರುವ ವಿವಿಧ ರೂಪದ ತ್ಯಾಜ್ಯ ವಸ್ತು ಮತ್ತು ಕೊಳಚೆ ನೀರು ಭೀಮಾ ನದಿ ಸೇರುತ್ತಿರುವುದರಿಂದ ನದಿ ಸಂಪೂರ್ಣ ಕಲುಷಿತವಾಗಿದೆ. ಈ ಭಾಗದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಾತಾವರಣ ಕಲುಷಿತವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ.

ಕೈಗಾರಿಕಾ ತ್ಯಾಜ್ಯ, ಕೃಷಿ ರಾಸಾಯನಿಕಗಳು, ಪ್ಲಾಸ್ಟಿಕ್, ಮತ್ತು ಕೊಳಚೆ ನೀರಿನಂತಹ ಹಾನಿಕಾರಕ ವಸ್ತುಗಳು ಭೀಮಾನದಿಗೆ ಸೇರುತ್ತಿರುವುದರಿಂದ ನೀರಿನ ಗುಣಮಟ್ಟ ಕಡಿಮೆಯಾಗಿ, ಜೀವಿಗಳಿಗೆ ಮತ್ತು ಪರಿಸರಕ್ಕೆ ವಿಷಕಾರಿಯಾಗುತ್ತಿದೆ. ನೀರು ಕುಡಿಯಲು ಮತ್ತು ಕೃಷಿಯಂತಹ ಅಗತ್ಯ ಉದ್ದೇಶಗಳಿಗೆ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅತಿಸಾರ, ಕಾಲರಾ, ಭೇದಿ, ಟೈಫಾಯಿಡ್ ಮತ್ತು ಪೋಲಿಯೊ ಮೈಲಿಟಿಸ್ನಂತಹ ಕಾಯಿಲೆಗಳಿಗೆ ಕಾರಣವಾಗುತ್ತಿದೆ ಎಂದು ತಾಲ್ಲೂಕು ಪರಿಸರ ಹೋರಾಟಗಾರ ರಮೇಶ್ ಪಾಟೀಲ ಹವಳಗ ಬೇಸರ ವ್ಯಕ್ತಪಡಿಸಿದರು.

ರೇಣುಕಾ ಸಕ್ಕರೆ ಕಾರ್ಖಾನೆಯವರು ಕಾರ್ಖಾನೆ ಹೊರಗೆ ಬಿಡುವ ತ್ಯಾಜ್ಯ ವಸ್ತುವನ್ನು ಮತ್ತು ಕೊಳಚೆ ನೀರನ್ನು ಸಂಗ್ರಹಿಸಲು ದೊಡ್ಡದಾದ ತಗ್ಗು ತೋಡಿದ್ದಾರೆ. ಆದರೆ ಅದು ಭರ್ತಿಯಾದ ಮೇಲೆ ಹೆಚ್ಚುವರಿ ತ್ಯಾಜ್ಯ ನೀರು ನದಿ ಸೇರುತ್ತಿದೆ. ಹೀಗಾಗಿ ನದಿಯ ನೀರು ಮಾಲಿನ್ಯವಾಗಿದ್ದು, ನದಿ ದಡದ ಮೇಲಿನ ಸುಮಾರು 30ಕ್ಕೂ ಹೆಚ್ಚು ಗ್ರಾಮಗಳ ಜನರು ಕಲುಷಿತ ನೀರು ಕುಡಿಯುವಂತಾಗಿದೆ’ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.

ತಾಲ್ಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಶ್ರೀಮಂತ್ ಬಿರಾದಾರ ಹಾಗೂ ಪ್ರಧಾನ ಕಾರ್ಯದರ್ಶಿ ಗುರು ಚಾಂದಕೋಟೆ ಮಾಹಿತಿ ನೀಡಿ, ‘ರೇಣುಕಾ ಸಕ್ಕರೆ ಕಾರ್ಖಾನೆಯವರು ನಿರಂತರವಾಗಿ ಕಾರ್ಖಾನೆಯಿಂದ ತ್ಯಾಜ್ಯ ವಸ್ತು ಮತ್ತು ಕಲುಷಿತವಾದ ನೀರು ಭೀಮಾ ನದಿಗೆ ಬಿಡುತ್ತಿರುವುದರಿಂದ ನದಿ ನೀರು ಕಲುಷಿತವಾಗಿದೆ. ಕೊಳವೆಬಾವಿ, ತೆರೆದ ಬಾವಿಯ ನೀರು ವಿಷಕಾರಿಯಾಗುತ್ತಿದೆ. ಈ ಬಗ್ಗೆ ಪರಿಸರ ಇಲಾಖೆಯವರು ಗಮನಹರಿಸಬೇಕು’ ಎಂದು ಅವರು ಆಗ್ರಹಿಸಿದರು.

ಅಧಿಕಾರಿಗಳು ಕಾರ್ಖಾನೆಗೆ ಮತ್ತು ಭೀಮಾ ನದಿಗೆ ಭೇಟಿ ನೀಡಿ ತ್ಯಾಜ್ಯ ವಸ್ತು ಮತ್ತು ಕಲುಷಿತ ನೀರು ಭೀಮಾ ನದಿ ಸೇರುತ್ತಿರುವುದನ್ನು ಪರಿಶೀಲಿಸಬೇಕು
–ರಮೇಶ್ ಪಾಟೀಲ, ಹವಳಗ,ತಾಲ್ಲೂಕು ಪರಿಸರ ಹೋರಾಟಗಾರ

ತಾ.ಪಂ ಕೆಡಿಪಿ ಸಭೆಯಲ್ಲಿ ಚರ್ಚೆ

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಕೆಡಿಪಿ ಸಭೆಯಲ್ಲಿ ರೇಣುಕಾ ಸಕ್ಕರೆ ಕಾರ್ಖಾನೆಯವರು ನಿರಂತರವಾಗಿ ತ್ಯಾಜ್ಯ ವಸ್ತು ಮತ್ತು ಕಲುಷಿತವಾದ ನೀರು ಭೀಮಾ ನದಿಗೆ ಬಿಡುತ್ತಿರುವ ಬಗ್ಗೆ ಬಹಳ ದಿನಗಳಿಂದ ಕೇಳಿಬರುತ್ತಿದೆ. ಘತ್ತರಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಾಲ್ಲೂಕು ಆಡಳಿತಕ್ಕೆ ವರದಿ ಸಲ್ಲಿಸಬೇಕು. ಕಾರ್ಖಾನೆಯವರಿಗೆ ನೋಟಿಸ್ ನೀಡಬೇಕು’ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.