ಅಫಜಲಪುರ: ತಾಲ್ಲೂಕಿನ ದೀಕ್ಸಂಗಾ (ಕೆ), ತೆಲ್ಲೂಣಗಿ ಗ್ರಾಮದ ಗ್ರಾಮಲೆಕ್ಕಿಗ ಲಕ್ಷ್ಮಿಕಾಂತ ಕಾಮರಡಿಗಿ ಅವರ ವಿರುದ್ಧ ಕೇಳಿಬಂದ ಗಂಭೀರ ಆರೋಪಗಳ ಹಿನ್ನೆಲೆ ಜಿಲ್ಲಾ ಶಿಸ್ತು ಪ್ರಾಧಿಕಾರ ಅಮಾನತುಗೊಳಿಸಿ ಕ್ರಮ ಕೈಗೊಂಡಿದೆ.

2025ನೇ ಸಾಲಿನಲ್ಲಿ ಬೆಳೆ ಪರಿಹಾರವನ್ನು ತಂತ್ರಾಂಶದಲ್ಲಿ ನಮೂದಿಸಿಲ್ಲ ಎನ್ನುವ ಆರೋಪ ಕಾರಣ ತನಿಖೆ ನಡೆಸಲು ಅಫಜಲಪುರ್ ಗ್ರೇಡ್–2 ತಹಶೀಲ್ದಾರರು ಇಲ್ಲಿನ ಉಪ ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರನ್ನು ಒಳಗೊಂಡ ತಂಡವನ್ನು ರಚಿಸಿದ್ದರು.

ಈ ಸಂದರ್ಭದಲ್ಲಿ 91 ರೈತರ ಪಟ್ಟಿಯನ್ನು ಪರಿಶೀಲಿಸಲಾಗಿತ್ತು. ಇದರಲ್ಲಿ ದೂರು ಸಲ್ಲಿಸಿದ 22 ರೈತರ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ನಮೂದಿಸಿಲ್ಲ ಎಂದು ತನಿಖಾ ತಂಡ ವರದಿ ಸಲ್ಲಿಸಿತ್ತು. ತಹಶೀಲ್ದಾರ್ ಕಚೇರಿಯಿಂದ ಕಾರಣ ಕೇಳಿ ಎರಡು ಬಾರಿ ಗ್ರಾಮಲೆಕ್ಕಿಗ ಲಕ್ಷ್ಮಿಕಾಂತ ಅವರಿಗೆ ನೋಟಿಸ್ ಕೂಡ ನೀಡಲಾಗಿತ್ತು. ಆದರೆ ಯಾವುದಕ್ಕೂ ಸಮಜಾಯಿಷಿ ನೀಡಿಲ್ಲ. ಅಲ್ಲದೆ ಪದೇಪದೆ ಅನಧಿಕೃತ ಗೈರಾಗುತ್ತಿದ್ದ ಕಾರಣ ಅಮಾನತು ಮಾಡಲಾಗಿದೆ.

ರೈತರಿಗೆ ಲಭ್ಯವಾಗಬೇಕಾದ ಬೆಳೆ ಪರಿಹಾರ ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಿ ವಂಚನೆ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಮ್ಯಾಕೇರಿ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-34-1406939217

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.