ಅಫಜಲಪುರ: ತಾಲ್ಲೂಕಿನ ರೇವೂರ(ಬಿ) ಜೆಸ್ಕಾಂ ಕೇಂದ್ರದಿಂದ ಅಸಮರ್ಪಕ ವಿದ್ಯುತ್ ಪೂರೈಕೆ ಮತ್ತು ಸಿಬ್ಬಂದಿ ಅಸಹಕಾರ ಧೋರಣೆ ಖಂಡಿಸಿ ಶನಿವಾರ ರೇವೂರ(ಬಿ) ಜೆಸ್ಕಾಂ ವಲಯದ ಬಡದಾಳ, ರೇವೂರ(ಬಿ), ಚಿಂಚೋಳಿ, ಅರ್ಜುಣಗಿ, ಸಿದ್ದನೂರ, ಅಂಕಲಗಿ, ಕುಲಾಲಿ ಗ್ರಾಮದ ರೈತರು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

‘ರೇವೂರ(ಬಿ) ಜೆಸ್ಕಾಂ ವಲಯದ ಗ್ರಾಮಗಳಿಗೆ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ. ಇದರಿಂದ ರೈತರು ಪರದಾಡುವಂತಾಗಿದೆ. ರೇವೂರ ಕೇಂದ್ರದಿಂದ ಚವಡಾಪುರದ ಪಕ್ಕದ ಊರಿನವರೆಗೆ ವಿದ್ಯುತ್ ನೀಡಲಾಗುತ್ತಿದೆ. ನಮ್ಮ ಭಾಗದಲ್ಲೇ ಹೆಚ್ಚಿನ ಬೇಡಿಕೆ ಇದ್ದರೂ ಪೂರೈಕೆ ಮಾಡುತ್ತಿಲ್ಲ’ ಎಂದು ರೈತರು ಆರೋಪಿಸಿದರು.

40 ಡಿಗ್ರಿ ಸೆಲ್ಸಿಯಸ್ಸ್ ಸುಡು ಬಿಸಿಲಿಗೆ ಬೆಳೆಗಳು ಒಣಗುತ್ತಿವೆ. ಇಂತಹ ಸ್ಥಿತಿಯಲ್ಲಿ ವಿದ್ಯುತ್ ಕಣ್ಣಮುಚ್ಚಾಲೆ ಆಡುತ್ತಿದೆ. ಜೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಅಸಹಕಾರ ಧೋರಣೆ ಅನುಸುರಿಸುತ್ತಿದ್ದಾರೆ. ರೈತರು ಫೋನ್ ಮಾಡಿದರೂ ಸ್ಪಂದಿಸುವುದಿಲ್ಲ. ಟಿಸಿ ಸುಟ್ಟರೆ ಹೊಸ ಟಿಸಿ ಅಳವಡಿಸಲು ಹಣದ ಬೇಡಿಕೆ ಇಡುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.

ರೇವೂರ(ಬಿ) ಕೇಂದ್ರ ಕೇವಲ 33 ಕೆವಿ ಸಾಮರ್ಥ್ಯ ಹೊಂದಿದ್ದು ಅದನ್ನು 65 ಕೆವಿಗೆ ಹೆಚ್ಚಿಸಬೇಕು. ರೈತರ ಸಮಸ್ಯೆಗಳನ್ನು ಮೇ 10ರೊಳಗೆ ಬಗೆಹರಿಸಬೇಕು. ಇಲ್ಲದಿದ್ದರೆ ಮೇ 15ರಿಂದ ನಿರಂತರ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಚವಡಾಪುರ ಜೆಸ್ಕಾಂ ವಲಯದ ಎಇಇ ಖೈಮುದ್ದಿನ್ ಭೇಟಿ ನೀಡಿ ಮೇ 10ರೊಳಗೆ ರೇವೂರ ವಲಯದ ವಿದ್ಯುತ್ ಸಮಸ್ಯೆ ಸರಿಪಡಿಸಲು ಪ್ರಯತ್ನಿಸುತ್ತೇವೆ. ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡುವುದೇ ಇಲಾಖೆಯ ಕರ್ತವ್ಯವಾಗಿದೆ. ಸದ್ಯ ಧರಣಿ ಕೈಬಿಡುವಂತೆ ಮನವಿ ಮಾಡಿಕೊಂಡರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-31-182113875

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.