ಅಫಜಲಪುರ: ‘ಆರೋಗ್ಯವೇ ಭಾಗ್ಯ ಎಂಬುದು ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವೇ ಮನುಷ್ಯನ ನಿಜವಾದ ಸಂಪತ್ತು ಎಂಬುದನ್ನು ಸಾರುವ ಗಾದೆ ಮಾತು. ಆರೋಗ್ಯವಿದ್ದರೆ ಮಾತ್ರ ಜೀವನದ ಸುಖ, ಯಶಸ್ಸು ಮತ್ತು ಸಾಧನೆಗಳನ್ನು ಆನಂದಿಸಲು ಸಾಧ್ಯ’ ಎಂದು ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ತಿಳಿಸಿದರು.

ಕರ್ನಾಟಕದ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ತಾಲ್ಲೂಕು ಘಟಕ ಹಾಗೂ ಅಕ್ಕಮಹಾದೇವಿ ಸಹಕಾರಿ ಸಂಘ ಇವರ ಸಹಯೋಗದಲ್ಲಿ ಗುರು ಮಳೇಂದ್ರ ಸಂಸ್ಥಾನ ಹಿರೇಮಠದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಕ್ಕಮಹಾದೇವಿ ಜಯಂತಿ ನಿಮಿತ್ತ ನಡೆದ ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಣ, ಅಂತಸ್ತುಗಳಿಗಿಂತ ಉತ್ತಮ ಆರೋಗ್ಯವೇ ಅತಿದೊಡ್ಡ ಭಾಗ್ಯ. ಆರೋಗ್ಯ ವಿಲ್ಲದಿದ್ದರೆ ಅಪಾರ ಆಸ್ತಿಯೂ ವ್ಯರ್ಥ’ ಎಂದರು.

ತಾಲ್ಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಬಸಣ್ಣಾ ಗುಣ್ಣಾರಿ, ಲಕ್ಷ್ಮೀ ಜಗದೀಶ ಗುಣಾರಿ ಮಾತನಾಡಿದರು.

ಶಾಂತಾಬಾಯಿ ಎಂ.ವೈ.ಪಾಟೀಲ ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನ ಉದ್ಘಾಟಿಸಿದರು. ದೇವಿಕಾ ಶರಣು ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಅನ್ನಪೂರ್ಣ ಪಾಟೀಲ ಅವರು ಪೂಜೆ ನೆರವೇರಿಸಿದರು. ಮಹಾನಂದ ಎಸ್. ಮಾಲೀಪಾಟೀಲ ಅವರು ಅಕ್ಕಮಹಾದೇವಿ ವಚನ ಪ್ರಾರ್ಥನೆ ಸಲ್ಲಿಸಿದರು. ಸಾವಿತ್ರಿ ಎಸ್.ರೋಡಗಿ ಭಕ್ತಿಗೀತೆ ಹಾಡಿ ಅನುಭವ ನುಡಿಗಳನ್ನು ಹಂಚಿಕೊಂಡರು.

ಅರುಣಾಬಾಯಿ ನೂಲಾ, ಪುಷ್ಪಾವತಿ ಎಸ್.ಟಕ್ಕಳಕಿ, ಸಾವಿತ್ರಿಬಾಯಿ ನಾಕೇದಾರ, ಜಯಶ್ರೀ ಉಪ್ಪಿನ, ಸಿದ್ದಮ್ಮ ಹೈಗೊಂಡೆ, ಪಾತಳನ್ನ ಫತಾಟೆ, ಡಾ.ಸಂಗಮೇಶ್ವರಿ ಪ್ರಮೋದ, ಜಗದೇವಿ ಜೇವರ್ಗಿ, ಚನ್ನಮ್ಮ ಜೇವರ್ಗಿ, ಅಶ್ವಿನಿ ನಿಗಡಿ, ರೇಖಾ ಮಸಳಿ ಇದ್ದರು.

ವೈದ್ಯರಾದ ಡಾ.ಶರಣಬಸಪ್ಪ ದಾಮಾ, ಡಾ.ರುದ್ರಪ್ಪ ಗುಗವಾಡ, ಡಾ.ವಿ.ಎಸ್.ಸೋಬಾನಿ, ಡಾ.ಸಂಜೀವ ಪಾಟೀಲ ಹಾಗೂ ಡಾ.ಅಂಬಿಕಾ ಪಾಟೀಲ ಅವರು ಆರೋಗ್ಯ ತಪಾಸಣೆ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-31-1112058391

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.