ಅಫಜಲಪುರ: ‘ಪ್ರತಿಯೊಬ್ಬರೂ ಸತ್ಯ ಶುದ್ಧವಾದ ಕಾಯಕ ಮಾಡುವುದು ಮತ್ತು ಅದರ ಪ್ರತಿಫಲವನ್ನು ಸಮಾಜದೊಂದಿಗೆ ದಾಸೋಹದ ರೂಪದಲ್ಲಿ ವಿನಿಯೋಗ ಮಾಡಿಕೊಂಡರೆ, ಆರ್ಥಿಕ ಸಮಾನತೆ ಉಂಟಾಗುತ್ತದೆ. ಕಾಯಕ ಮತ್ತು ದಾಸೋಹ ಆರ್ಥಿಕತೆಯ ಎರಡು ಸ್ತಂಭಗಳಾಗಿವೆ’ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ವಾಸುದೇವ ಸೇಡಂ ಎಚ್ ಹೇಳಿದರು.

ತಾಲ್ಲೂಕಿನ ಗೊಬ್ಬುರವಾಡಿ ತಾಂಡಾದ ಸಂತ ಸೇವಾಲಾಲ ಮಹಾರಾಜ ಆಶ್ರಮದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬಸವ ಜಯಂತಿ ಅಂಗವಾಗಿ ಜರುಗುತ್ತಿರುವ ಸರಣಿ ಉಪನ್ಯಾಸ ಮಾಲಿಕೆ-8ರಲ್ಲಿ ‘ಬಸವಣ್ಣನವರ ಆರ್ಥಿಕ ಚಿಂತನೆಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದರು.

‘ಬಸವಣ್ಣನವರ ಆರ್ಥಿಕ ಚಿಂತನೆಗಳು ಕೇವಲ ಸಿದ್ಧಾಂತವಾಗಿರದೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೇಲೆ ಆಧಾರಿತವಾದ ಪ್ರಾಯೋಗಿಕ ಜೀವನ ವಿಧಾನಗಳಾಗಿವೆ. ಕಾಯಕವೇ ಕೈಲಾಸ, ದಾಸೋಹ ತತ್ವ, ಆರ್ಥಿಕ ಸಮಾನತೆಯ ತತ್ವ ಆರ್ಥಿಕ ಸಮಾನತೆಗೂ ಮಾರ್ಗದರ್ಶಿಯಾಗಿದೆ’ ಎಂದರು.

ಆಶ್ರಮದ ಪೀಠಾಧಿಪತಿ ಬಳಿರಾಮ ಮಹಾರಾಜ, ಉಪನ್ಯಾಸಕ ಹಾಗೂ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಹರಿಶ್ಚಂದ್ರ ಪವಾರ, ಜಗನಾಥ ರಾಠೋಡ, ರಾಮಚಂದ್ರ ಜಾಧವ, ಜೈರಾಮ ಜಾಧವ,ಮಂಜುನಾಥ ಪವಾರ, ಸುಧೀರ ಜಾಧವ, ದತ್ತು ರಾಠೋಡ, ಗೀತಾ ರಾಠೋಡ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-31-58195173

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.