ಅಫಜಲಪುರ: ‘ನ್ಯಾಯಾಲಯಕ್ಕೆ ಕಕ್ಷಿದಾರರೇ ಪ್ರಮುಖರಾಗಿದ್ದು, ನ್ಯಾಯಾಲಯದಲ್ಲಿ ಮೂಲಭೂತ ಸೌಕರ್ಯ ಒದಗಿಸುವುದು ಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಕೆಲಸ ನಿರ್ವಹಿಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿನಾಯಕ ಮಾಯಣ್ಣವರ ತಿಳಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ತಾಲ್ಲೂಕು ವಕೀಲರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಲೋಕ್ ಅದಾಲತ್ ಮೂಲಕ ಕಕ್ಷಿದಾರರು ನ್ಯಾಯಾಲಯದಲ್ಲಿ ಸಮಸ್ಯೆ ಕ್ಷಣಾರ್ಧದಲ್ಲೇ ಬಗೆಹರಿಸಬಹುದು. ಸಂಘವು ವಿಭಿನ್ನವಾಗಿ ಕಾರ್ಯನಿರ್ವಹಿಸಲಿದೆ. ಹೀಗಾಗಿ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ’ ಎಂದರು.

ಸಿವಿಲ್ ನ್ಯಾಯಾಧೀಶ ಅನಿಲ ಅಮಾತೆ ಮಾತನಾಡಿ, ‘ವಕೀಲರು ನ್ಯಾಯ ಪರವಾಗಿ ಮತ್ತು ಕಕ್ಷಿದಾರರ ಹಿತ್ತಾಸಕ್ತಿಯ ಪರವಾಗಿ ಕೆಲಸ ನಿರ್ವಹಿಸಬೇಕು’ ಎಂದರು.

ವಕೀಲರ ಸಂಘದ ನೂತನ ತಾಲೂಕಾಧ್ಯಕ್ಷ ಅರ್ಜುನ್ ಕೇರೂರ ಮಾತನಾಡಿ, ‘ಅಭಿವೃದ್ಧಿ ಹಾಗೂ ಜನಪರ ಕೆಲಸ ಆಗಬೇಕಾದರೆ ಎಲ್ಲರ ಸಹಕಾರ ಅಗತ್ಯ’ ಎಂದರು.

ಹಿರಿಯ ವಕೀಲ ಸಿ.ಎಸ್. ಹಿರೇಮಠ, ಶಂಕರರಾವ್ ಹುಲ್ಲೂರ, ಕೆ.ಜಿ.ಪೂಜಾರಿ, ವಾಸೀಮ್ ಜಾಗೀರದಾರ, ನಾಗೇಶ್ ಕೊಳ್ಳಿ, ಎಸ್. ಜೆ.ಗುತ್ತೇದಾರ, ಮಂಜುನಾಥ್ ಕೊಳ್ಳಿ ಎಂ ಬಿ ಪತ್ತಾರ, ಅನೀಲ ಜಮಾದಾರ, ಜಯಶ್ರೀ ಗಣಾಚಾರಿ, ಡಿ.ಡಿ.ದೇಶಪಾಂಡೆ, ಯಲ್ಲಾಲಿಂಗ ಜಮಾದಾರ, ಸಂತೋಷ ಶೇಜುಳೆ, ರಾಮವಿಲಾಸ್ ಸುತಾದ, ರೇವಣಸಿದ್ದಪ್ಪ ಹೋಳಿಕೇರಿ, ಮಲ್ಲಣ್ಣಗೆ ಪಾಟೀಲ, ಕೇದಾರ ಪೂಜಾರಿ ಉಪಸ್ಥಿತರಿದ್ದರು.

ಪದಾಧಿಕಾರಿಗಳ ನೇಮಕ: ಅಫಜಲಪುರ ತಾಲ್ಲೂಕು ವಕೀಲರ ಸಂಘಕ್ಕೆ ಅರ್ಜುನ್ ಕೇದೂರ (ಅಧ್ಯಕ್ಷ), ರಾಜೇಂದ್ರ ಸರದಾರ್, ಅನಿತಾ ದೊಡ್ಡನಿ (ಉಪಾಧ್ಯಕ್ಷ), ಪ್ರಕಾಶ್ ಪಾಟೀಲ್ (ಕಾರ್ಯದರ್ಶಿ), ಶಂಕರ ರಾಠೋಡ (ಜಂಟಿ ಕಾರ್ಯದರ್ಶಿ), ಶ್ರೀವಲ್ಲಭ್ ಪೂಜಾರಿ (ಖಜಾಂಚಿ), ರಾಜ್ ಭಾಸ್ಕರ್ ಗೋಲಗೇರಿ (ಗ್ರಂಥಾಲಯ ಕಾರ್ಯದರ್ಶಿ) ಪದಗ್ರಹಣ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-31-1280747615

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.