ಅಫಜಲಪುರ: ತಾಲ್ಲೂಕಿನ ಸುಕ್ಷೇತ್ರ ನೀಲೂರ ಗ್ರಾಮದ ಶಿವಶರಣೆ ನಿಂಬೆಕ್ಕ ದೇವಿಯ ಜೀವನ ಚರಿತ್ರೆ ಹಾಗೂ ಐತಿಹಾಸಿಕ ಪವಾಡಗಳ ಕುರಿತು ಸಾಹಿತಿ ಬಸವರಾಜ ಹೂಗಾರ ಕೋರಳ್ಳಿ ರಚಿಸಿರುವ ಭಕ್ತಿಗೀತೆ ಸಂಕಲನವನ್ನು ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹಾಗೂ ಚಿನ್ಮಯಗಿರಿಯ ವೀರಮಹಾಂತ ಶಿವಾಚಾರ್ಯರು ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ‘ನಿಂಬೆಕ್ಕದೇವಿಯು ಸಾಕಷ್ಟು ಪವಾಡಗಳನ್ನು ಮಾಡಿ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ನೀಲೂರ ಗ್ರಾಮದ ಭಕ್ತರು ಧಾರ್ಮಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವುದು ಸಂತಸ’ ಎಂದರು.

ಮುಖಂಡ ಮಲ್ಲಿನಾಥ ಹಾಳಮಳ್ಳಿ ಮಾತನಾಡಿ, ‘ಶಿವಶರಣೆ ನೀಲೂರ ನಿಂಬೆಕ್ಕದೇವಿಯ ಭಕ್ತಿಗೀತೆಗಳ ಕೃತಿ ಲೋಕಾರ್ಪಣೆಗೊಂಡಿದ್ದು ಸಂತಸ ತಂದಿದೆ. ಕೃತಿಯಿಂದ ನಿಂಬೆಕ್ಕ ದೇವಿಯ ಐತಿಹಾಸಿಕ ಜೀವನ ಚರಿತ್ರೆಯು ಸಮಾಜದ ಮುನ್ನಲೆಗೆ ಬರಲಿದ್ದು, ನಿಂಬೆಕ್ಕ ದೇವಿಯ ಮಾರ್ಗದರ್ಶನದ ಹಾದಿಯಲ್ಲಿ ಸಾಗೋಣ’ ಎಂದರು.

ಶಶಿಕುಮಾರ ದೇವರು ಮೇಳಕುಂದ, ಬಂಗಾರ ಜಡೆ ನೀಲಕಂಠೇಶ್ವರ ಹಿರೇಮಠದ ಧರ್ಮದರ್ಶಿ ಶರಣಯ್ಯ ಸ್ವಾಮೀಜಿ, ಚಂದ್ರಶೇಖರ ಕರಜಗಿ, ಶರಣಬಸಪ್ಪ ಪದಕಿ, ರಮೇಶ್ ಸರಡಗಿ, ಗುರಯ್ಯ ಮಠ, ಮಲ್ಲಿನಾಥ ಹಾಳಮಳ್ಳಿ, ಭಗವಂತರಾವ ಕಾಮಜಿ, ಶಿವಲಿಂಗಪ್ಪ ಮುಗದಿ, ನಾಗಪ್ಪ ಠಕ್ಕಾ, ಬಾಬುರಾವ ಕುಲಕರ್ಣಿ, ಸಾಯಬಣ್ಣ ಹೂಗಾರ, ಮಲ್ಲಿನಾಥ ಕಾಮದಿ, ಅಂಬರೀಶ ಹೂಗಾರ ಕೋರಳ್ಳಿ, ವೈಜನಾಥ ಸಾವಳಗಿ, ಸಾತಲಿಂಗಪ್ಪ ಲೋಣಿ, ಶಿವಾನಂದ ಅಂಬಲಗಿ, ವಸಂತ ಜಾದವ, ಸುರೇಶ ಮುಗದಿ, ಅಪ್ಪಾಸಾಬ ಹಾಳಮಳ್ಳಿ, ಶರಣು ಹಾಳಮಳ್ಳಿ, ಶ್ರೀಶೈಲ ಕಾಮಜಿ ಸೇರಿದಂತೆ ಅನೇಕರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-31-511727451

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.