ಅಫಜಲಪುರ: ಅಕ್ರಮ ಇ-ಔಷಧ ಮಾರಾಟ ಸಂಸ್ಥೆಗಳು ಹಾಗೂ ನಿಗದಿಗಿಂತ ಕಡಿಮೆ ದರದಲ್ಲಿ ಔಷಧಗಳನ್ನು ಮಾರಾಟ ಮಾಡುವುದರಿಂದಾಗಿ ಸಣ್ಣ ಮತ್ತು ಸ್ವತಂತ್ರ ಔಷಧ ಚಿಲ್ಲರೆ ಮಾರಾಟಗಾರರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮವುಂಟಾಗಿದೆ. ಕೂಡಲೇ ಇದನ್ನು ನಿಲ್ಲಿಸುವಂತೆ ಒತ್ತಾಯಿಸಿ ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘದವರು ತಹಶೀಲ್ದಾರ್ ಕಚೇರಿಯ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಆನ್ಲೈನ್ ಔಷಧ ಮಾರಾಟ ಹಾಗೂ ಬೃಹತ್ ಕಾರ್ಪೊರೇಟ್ ಉದ್ಯಮಗಳು ಭಾರಿ ಪ್ರಮಾಣದ ರಿಯಾಯಿತಿ ನೀಡುವ ಪದ್ಧತಿಯನ್ನು ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟಸ್ ವತಿಯಿಂದ ಕರೆ ನೀಡಿದ ಒಂದು ದಿನದ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಯಿತು. ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರ ಈ ಪದ್ಧತಿಯನ್ನು ರದ್ದುಪಡಿಸುವಂತೆ ಔಷಧ ವ್ಯಾಪಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಕಮಲಾಕರ ಶೆಟ್ಟಿ ಹಾಗೂ ಕಾರ್ಯದರ್ಶಿ ಮಹೇಶ ಎಸ್.ಅಲೆಗಾವ್ ಒತ್ತಾಯಿಸಿದರು.

‘ಔಷಧ ಸಲಹಾ ಚೀಟಿಯನ್ನು ಪದೇಪದೆ ಬಳಸಿಕೊಳ್ಳುವ ಮೂಲಕ ಹಾಗೂ ಆ್ಯಂಟಿಬಯೋಟಿಕ್ ಮತ್ತು ವ್ಯಸನವಾಗಿ ಮಾರ್ಪಡುವ ಔಷಧಗಳನ್ನು ಡಿಜಿಟಲ್ ಜಾಲಗಳ ಮೂಲಕ ಅನಿಯಂತ್ರಿತವಾಗಿ ಮಾರಾಟ ಮಾಡುವ ಮೂಲಕ (ಜಿಎಸ್ಆರ್) 817(ಇ) ಮತ್ತು ಜಿಎಸ್ಆರ್ 220(ಇ) ಅಡಿಯಲ್ಲಿನ ಶಾಸನಾತ್ಮಕ ವಿನಾಯಿತಿಯನ್ನು ಆನ್ಲೈನ್ ಔಷಧ ಮಾರಾಟ ವೇದಿಕೆಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ’ ಎಂದು ಆನಂದ ಶೆಟ್ಟಿ ಹಾಗೂ ಆನಂದ ಬಿರಾದಾರ ಆರೋಪಿಸಿದರು.

ನಂತರ ಗ್ರೇಡ್–2 ತಹಶೀಲ್ದಾರ್ ಶರಣಬಸಪ್ಪ ಅವರ ಮೂಲಕ ಪ್ರಧಾನ ಮಂತ್ರಿಯವರಿಗೆ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ನಾಗನಾಥ ಕಮರೆಡ್ಡಿ, ಸುಭಾಷ ಅಲ್ದಿ, ಶರಣು, ಪುಟ್ಟುಗೋಡ ಪೊಲೀಸ್ ಪಾಟೀಲ, ಶಿವಸ್ವಾಮಿ ಜೀವನಗಿ, ರಜನೀಶ, ಗಂಗಾಧರ, ಮಾಂತೇಶ ಯಂಕಂಚಿ, ಆದಿಲ್ ಪಾಶ, ರಾಘವೇಂದ್ರ ಚಿನ್ವಾರ್, ಸತೀಶ ಹಿರೇಮಠ, ಅನಿಲ ನಾಕೇದಾರ, ಜಗನ್ನಾಥ ಕುಲಕರ್ಣಿ, ಚೆನ್ನವೀರ ಹಿರೇಮಠ, ಕಿಟ್ಟು ಕುಲಕರ್ಣಿ, ಬಸ್ವರಾಜ ಮನಮಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-31-97699792

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.