ಅಫಜಲಪುರ: ತಾಲ್ಲೂಕಿನಲ್ಲಿ ಸೋಮವಾರ ಸಂಜೆ ಸುರಿದ ಬಿರುಗಾಳಿ ಸಹಿತ ಅಕಾಲಿಕ ಮಳೆಗೆ ಸುಮಾರು 500 ಎಕರೆ ಜಮೀನಿನಲ್ಲಿ ಕಟಾವಿ ಬಂದಿದ್ದ ಬಾಳೆ ಗಿಡಗಳು ನೆಲಕ್ಕುರುಳಿ ಹಾಳಾಗಿದೆ.

ತೋಟಗಾರಿಕೆ ಇಲಾಖೆಯ ಮಾಹಿತಿಯಂತೆ ತಾಲ್ಲೂಕಿನಲ್ಲಿ ಸುಮಾರು ಒಂದು ಸಾವಿರ ಎಕರೆ ಜಮೀನಿನಲ್ಲಿ ರೈತರು ಬಾಳೆ ನಾಟಿ ಮಾಡಿದ್ದಾರೆ. ತಾಲ್ಲೂಕಿನ ಮಾಶಾಳ, ಬಳೂರ್ಗಿ, ಬಡದಾಳ, ರೇವೂರು (ಬಿ)., ಅಂಕಲಗಿ, ಚೌಡಾಪುರ, ಅಫಜಲಪುರ, ದಿಕ್ಸಂಗಿ, ಜೇವರ್ಗಿ (ಬಿ)., ಕರಜಗಿ, ನಂದರಗಿ ಗ್ರಾಮಗಳಲ್ಲಿ ಬೆಳೆಯಲಾಗಿದ್ದ ಬಾಳೆ ಬೆಳೆ ಹಾಳಾಗಿದೆ.

ಅಷ್ಟೇ ಅಲ್ಲದೆ ಕೆಲವು ಗ್ರಾಮಗಳಲ್ಲಿ ಲಿಂಬೆ, ನುಗ್ಗೆ ಗಿಡಗಳು ಸಹ ಬಿರುಗಾಳಿಗೆ ಹಾಳಾಗಿದ್ದು, ‘ಮಂಗಳವಾರ ಕರಜಗಿ ಹೋಬಳಿಗೆ ಭೇಟಿ ನೀಡಿ ರೈತರ ತೋಟಗಳಲ್ಲಿ ಹಾಳಾಗಿರುವ ಬಾಳೆ ಬೆಳೆಯ ಕುರಿತು ಸರ್ವೆ ಮಾಡಲಾಗಿದೆ’ ಎಂದು ತೋಟಗಾರಿಕೆ ಅಧಿಕಾರಿ ಸಕಲೇಶ ತಿಳಿಸಿದ್ದಾರೆ.

ಬಳೂರ್ಗಿ ಗ್ರಾಮದ ರೈತರಾದ ಭೀಮಣ್ಣಾ ಚಂದ್ರಾಮ ಶಿನ್ನೂರ, ರಾಜಶೇಖರ ರೆಡ್ಡಿಯವರ ತೋಟದಲ್ಲಿನ ಕಟಾವಿಗೆ ಬಂದಿದ್ದ 4 ಸಾವಿರ ಬಾಳೆ ಗಿಡ ಬಿರುಗಾಳಿ, ಮಳೆಗೆ ನೆಲಕ್ಕುರುಳಿ ಹಾಳಾಗಿದೆ. ಸಂದೀಪ ಫಲಾಲಸಿಂಗ್ ರಾಠೋಡ ಅವರ 3 ಸಾವಿರ ಬಾಳೆ ಗಿಡಗಳು ಹಾಳಾಗಿದೆ. ಬಳೂರ್ಗಿಗೆ ಗ್ರಾಮಲೆಕ್ಕಿಗ ಸಿದ್ದು ಹದಲೂರು ಭೇಟಿ ನೀಡಿ ಹಾಳಾದ ಬಾಳೆ ಗಿಡಗಳ ಸರ್ವೆ ಮಾಡಿದ್ದಾರೆ.

ಈ ಕುರಿತು ಶಾಸಕ ಎಂ.ವೈ.ಪಾಟೀಲ ಅವರು ಮಾಹಿತಿ ನೀಡಿ, ‘ಬಿರುಗಾಳಿ, ಮಳೆಗೆ ತಾಲ್ಲೂಕಿನಲ್ಲಿ ತೋಟಗಾರಿಕೆ ಬೆಳೆಗಳು ಹಾಳಾಗಿದ್ದು, ಅದಕ್ಕಾಗಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಹಾಳಾದ ಬೆಳೆಗಳ ಬಗ್ಗೆ ಸರ್ವೆ ಮಾಡಬೇಕು. ಸೂಕ್ತ ಪರಿಹಾರಕ್ಕಾಗಿ ಸರ್ಕಾರದ ಮೇಲೆ ಒತ್ತಡ ತರಲಾಗುವುದು’ ಎಂದು ತಿಳಿಸಿದ್ದಾರೆ.

‘ತೋಟಗಾರಿಕೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹಾಗೂ ಬೇಜವಾಬ್ದಾರಿಯಿಂದಾಗಿ ಸರ್ವೆ ಕಾರ್ಯ ನಡೆಯುತ್ತಿಲ್ಲ. ಅದಕ್ಕಾಗಿ ಸರ್ಕಾರ ತೋಟಗಾರಿಕೆ ಇಲಾಖೆಗೆ ಸಿಬ್ಬಂದಿ ನೇಮಕ ಮಾಡಬೇಕು. ಹಾಳಾದ ಬಾಳೆ ಬೆಳೆಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರವನ್ನು ನೀಡಬೇಕು’ ಎಂದು ಬಳೂರ್ಗಿ ಗ್ರಾಮದ ರೈತರ ಸುಭಾಷ ವೆಂಕಯ್ಯ ಗುತ್ತೇದಾರ್ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-34-33950978

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.