ಅಫಜಲಪುರ: ತಾಲ್ಲೂಕಿನ ಭೀಮಾ ತೀರದಲ್ಲಿರುವ ಉಡಚಣದ ಪವಾಡಪುರುಷ ಹುಚ್ಚಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಫೆ.17 ರಿಂದ 22ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಹುಚ್ಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿಯವರು ತಿಳಿಸಿದ್ದಾರೆ.

ಜಾತ್ರಾ ಮಹೋತ್ಸವ ಕುರಿತು ಟ್ರಸ್ಟ್ನ ಸದಸ್ಯರು ಸೋಮವಾರ ಮಾಹಿತಿ ನೀಡಿ, ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಲು ಹುಚ್ಚಲಿಂಗೇಶ್ವರ ಕರ್ತೃ ಗದ್ದುಗೆ ವಿಶೇಷ ಪೂಜೆ ನಡೆಯುತ್ತಿದೆ. ಮಂಗಳವಾರದಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮಹೋತ್ಸವ ಹಾಗೂ ಶನಿವಾರದಂದು ರಾತ್ರಿ 12 ಗಂಟೆಗೆ ಬನ್ನಿ ಕೊರಡು ರಾಸಿಗೆ ಶರಣು ಈರಣ್ಣ ನೀಲಂಗೆ ಅಗ್ನಿ ಸ್ಪರ್ಶ ಮಾಡುವರು. 22ರಂದು ಹುಚ್ಚಲಿಂಗೇಶ್ವರ ಪಲ್ಲಕ್ಕಿಯೊಂದಿಗೆ ಗಂಗೆಸಿತ್ತಾಳ ಪೂಜೆ ಜರುಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಗ್ರಾಮದ ಹೊರವಲಯದಲ್ಲಿ ಬೃಹತ್ ಪ್ರಮಾಣದಲ್ಲಿ ದನಗಳ ಜಾತ್ರೆ ನಡೆಯಲಿದ್ದು, ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ವತಿಯಿಂದ ನೀರಿನ ವ್ಯವಸ್ಥೆ, ದನಗಳ ಆರೋಗ್ಯ ತಪಾಸಣೆ ಶಿಬಿರ ಹಾಗೂ ದಾಸೋಹ ಸೇವೆ ಜರುಗಲಿದೆ ಎಂದು ಕಮಿಟಿಯ ಅಧ್ಯಕ್ಷ ಸಿದ್ದಾರ್ಥ್ ಮೈಂದರಗಿ, ಉಪಾಧ್ಯಕ್ಷ ಗಡ್ಡದೆಪ್ಪ ಕಡ್ಲಾಜಿ, ಕಾರ್ಯದರ್ಶಿ ಖಾಜಪ್ಪ ತಿಳಿಸಿದ್ದಾರೆ.

ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ಅಫಜಲಪುರ, ಇಂಡಿ, ಅಕ್ಕಲಕೋಟ ಮುಂತಾದ ಸ್ಥಳಗಳಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಹುಚ್ಚಲಿಂಗೇಶ್ವರ ಕಪಾಪೋಷಿತ ನಾಟಕ ಸಂಘದವರಿಂದ 22 ಹಾಗೂ 24ರಂದು ರಾತ್ರಿ 10.30 ಗಂಟೆಗೆ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಕಮಿಟಿಯವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.