ಸಂಗೀತಾ ಅವರು ಅಂಗನವಾಡಿ ಕೇಂದ್ರದ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿರುವುದಿಲ್ಲ. ಜತೆಗೆ ಬೀದರ್‌ನ ಕಾಲೇಜೊಂದರ ಉಪನ್ಯಾಸಕಿ ಆಗಿರುವುದಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಿಗೆ ಮಾಹಿತಿ ಸಲ್ಲಿಸಿ, ಮೌಲ್ಯಮಾಪನ ಮಾಡಿದ ಆರೋಪ ಕೇಳಿಬಂದಿತ್ತು. ಆರೋಪ ಸಂಬಂಧ ನೋಟಿಸ್ ನೀಡಿದ್ದರೂ ಯಾವುದೇ ಸಮಜಾಯಿಷಿ ಸಲ್ಲಿಸಿಲ್ಲ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.