ಕಾರ್ಮಿಕರಿಂದ ಕಲ್ಲು ತೂರಾಟ; ಪೊಲೀಸ್ ಅಧಿಕಾರಿಗೆ ಗಾಯ

7
ಕ್ರೇನ್ ಬಿದ್ದು ಆರು ಕಾರ್ಮಿಕರ ಸಾವು ಪ್ರಕರಣ

ಕಾರ್ಮಿಕರಿಂದ ಕಲ್ಲು ತೂರಾಟ; ಪೊಲೀಸ್ ಅಧಿಕಾರಿಗೆ ಗಾಯ

Published:
Updated:
Deccan Herald

ಕಲಬುರ್ಗಿ: ಸೇಡಂ ತಾಲ್ಲೂಕು ಬೆನಕನಹಳ್ಳಿ ಮತ್ತು ಕೋಡ್ಲಾ ಗ್ರಾಮದ ಮಧ್ಯದಲ್ಲಿರುವ ಶ್ರೀ ಸಿಮೆಂಟ್ ಕಾರ್ಖಾನೆ ಆವರಣದಲ್ಲಿ ಗುರುವಾರ ಸಂಜೆ ಕ್ರೇನ್ ಬಿದ್ದು ಆರು ಜನ ಕಾರ್ಮಿಕರು ಮೃತಪಟ್ಟಿದ್ದರಿಂದ ರೊಚ್ಚಿಗೆದ್ದಿರುವ ಬಿಹಾರದ ಕಾರ್ಮಿಕರು ಕಾರ್ಖಾನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಕಲ್ಲು ತೂರಾಟದಲ್ಲಿ ಆರ್‌ಪಿಐ ಅಧಿಕಾರಿಯೊಬ್ಬರ ಕಾಲಿಗೆ ಗಾಯವಾಗಿದೆ. ಕಾರ್ಖಾನೆಯ ಕಚೇರಿ ಕಿಟಕಿಗಳ ಗಾಜುಗಳನ್ನು ಜಖಂಗೊಳಿಸಿದ್ದಾರೆ. ಅಲ್ಲದೆ ಸರ್ಕಾರಿ ಬಸ್‌ನ ಗಾಜುಗಳನ್ನು ಪುಡಿ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಸ್ಥಳದಲ್ಲಿ 500ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.

ಗುರುವಾರ ರಾತ್ರಿಯಿಂದಲೇ ಪ್ರತಿಭಟನೆ ಮಾಡುತ್ತಿರುವ ಕಾರ್ಮಿಕರು, ಶುಕ್ರವಾರ ಬೆಳಿಗ್ಗೆ ಕಾರ್ಖಾನೆ ಮೇಲೆ ಕಲ್ಲು ತೂರುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಆಡಳಿತ ಮಂಡಳಿಯನ್ನು ಒತ್ತಾಯಿಸಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್, ಉಪ ವಿಭಾಗಾಧಿಕಾರಿ ಬಿ.ಸುಶೀಲಾ, ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಡಿವೈಎಸ್‌ಪಿ ಯು.ಶರಣಪ್ಪ ಭೇಟಿ ನೀಡಿ, ಪರಿಶೀಲಿಸಿದರು. 

ಏನಿದು ಘಟನೆ?: ಗುರುವಾರ ರಾತ್ರಿ ವೆಲ್ಡಿಂಗ್ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರ ಮೇಲೆ ಕ್ರೇನ್ ಬಿದ್ದಿತ್ತು. ತಬರಕ್ (25), ಬಿಪಿನ್ ಸಹಾನಿ (32), ಅಜಯ್ (27), ಮಹಮ್ಮದ್ ಜುಬೇರ್ (32), ಸುಧಾಕರ್ ಸಹಾನಿ (33) ಮತ್ತು ಕೋಕೋ (26) ಮೃತಪಟ್ಟಿದ್ದರು. 15ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದು, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !