ಸೋಮವಾರ, ಆಗಸ್ಟ್ 8, 2022
22 °C

‘ಆಹಾರ ಸಂಸ್ಕರಣಾ ಘಟಕ ಅಭಿವೃದ್ಧಿಗೆ ಆದ್ಯತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಆಹಾರ ಸಂಸ್ಕರಣಾ ಘಟಕಕ್ಕೆ  ಕೃಷಿ ಸಚಿವ ಬಿ.ಸಿ.ಪಾಟೀಲ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ಆಹಾರ ಸಂಸ್ಕರಣಾ ಘಟಕವನ್ನು ಗುತ್ತಿಗೆ ಆಧಾರದ ಮೇಲೆ ಪಡೆದಿದ್ದ ಅಕ್ಷಯ್ ಫುಡ್ ಕಂಪನಿ ಅವರ ಅವಧಿ ಮುಗಿದಿದೆ. ಅವರು ಮತ್ತೆ ಗುತ್ತಿಗೆ ಪಡೆದುಕೊಳ್ಳಲು ಕರ್ನಾಟಕ ರಾಜ್ಯ ಸಣ್ಣ ಪ್ರಮಾಣದ ಕೈಗಾರಿಕೆ ಅಭಿವೃದ್ಧಿ ನಿಗಮದಿಂದ ಅವಧಿ ಗುತ್ತಿಗೆ ನವೀಕರಿಸಿಕೊಳ್ಳಬೇಕು ಎಂದರು.

ಘಟಕಕ್ಕೆ ಮೂಲಸೌಕರ್ಯ ಕಲ್ಪಿಸುವ ಮೂಲಕ ನಿವೇಶನಗಳನ್ನು ಪಡೆದ ಉಪ ಗುತ್ತಿಗೆ ಪಡೆದವರಿಗೆ ಕೈಗಾರಿಕೆ ಸ್ಥಾಪಿಸಲು ಅವಧಿ ವಿಸ್ತರಣೆ ಮಾಡಿಸಿಕೊಡಬೇಕು. ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಆರಂಭಿಸಲು ಸರ್ಕಾರದಿಂದ ಹಾಗೂ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ ಪಡೆದುಕೊಳ್ಳಲು ಅಕ್ಷಯ್ ಫುಡ್ಸ್ ಕಂಪನಿಯವರು ಸಹಾಯ ಕಲ್ಪಿಸಿಕೊಡಬೇಕು. ಈ ಕುರಿತು ಬೆಂಗಳೂರಿನಲ್ಲಿ ಶೀಘ್ರದಲ್ಲಿಯೇ ಕೃಷಿ ಹಾಗೂ ಕೈಗಾರಿಕಾ ಇಲಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಆಹಾರ ಸಂಸ್ಕರಣಾ ಘಟಕದ ಶ್ರೇಯೋಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಘಟಕದಲ್ಲಿ ನಿವೇಶನ ಪಡೆದುಕೊಂಡ ಸಣ್ಣ ಕೈಗಾರಿಕೆ ಉದ್ಯಮಿಗಳು ಕೃಷಿ ಸಚಿವರಿಗೆ ಮನವಿಪತ್ರ ಸಲ್ಲಿಸಿದರು. ಪ್ರಮುಖವಾಗಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಲೀಸ್ ಅವಧಿ 5 ರಿಂದ 8 ವರ್ಷಕ್ಕೆ ವಿಸ್ತರಣೆ ಮಾಡಬೇಕು. ಬ್ಯಾಂಕಿನಲ್ಲಿ ಕೊಲ್ಯಾಟರಲ್ ಸೆಕ್ಯುರಿಟಿ ಇಲ್ಲದೆ ಸಾಲ ಸೌಲಭ್ಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ಧೇವಾಡಗಿ, ಮುಖಂಡರಾದ ರಮೇಶ ಬಾಬು ವಕೀಲ, ಬಸವರಾಜ ಮುಕ್ಕಾಣಿ, ಬಸವರಾಜ ಪಾಟೀಲ ನರಿಬೋಳ, ಬಾಪುಗೌಡ ಬಿರಾಳ, ಮಹಾಂತ ಸಾಹು ಹರವಾಳ, ಬಸವರಾಜ ಸಾಸಾಬಾಳ, ಸಂತೋಷ ಸೊಪ್ಪಣ್ಣ, ಅಶೋಕ ಗುಡೂರ, ರವೀಂದ್ರ ವಕೀಲ, ಶರಣು ರಾಂಪೂರ, ಕಾಶಿಂ ಜವಳಗಿ, ದೇವಿಂದ್ರಪ್ಪಗೌಡ ಹಳ್ಳಿ, ಮಲ್ಲಣಗೌಡ ಗುಳ್ಯಾಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.