ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಿಪ್ರ ಸಂಚಾರ ಪೀಡೆ ಸಮೀಕ್ಷೆಗೆ ಚಾಲನೆ

Last Updated 10 ನವೆಂಬರ್ 2020, 15:04 IST
ಅಕ್ಷರ ಗಾತ್ರ

ಕಲಬುರ್ಗಿ: ಕೃಷಿ ಇಲಾಖೆ, ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಆರಂಭಿಸಿದ ‘ಬೆಳೆಗಳ ಕ್ಷಿಪ್ರ ಸಂಚಾರ ಪೀಡೆ ಸಮೀಕ್ಷೆ’ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ತೊಗರಿ, ಹತ್ತಿ ಸೇರಿದಂತೆ ಇತರೆ ಬೆಳೆಗಳ ಕೀಟ ಬಾಧೆ ಹಾಗೂ ರೋಗ ಹತೋಟಿಗೆ ಸಂಬಂಧಿಸಿದಂತೆ 2020-21ನೇ ಸಾಲಿಗಾಗಿ ಈ ಸಮೀಕ್ಷೆ ಆರಂಭಿಸಲಾಗಿದೆ. ಕ್ಷೇತ್ರ ಮಟ್ಟದಲ್ಲಿ ಕೃಷಿ ಇಲಾಖಾ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ಬೆಳೆಗಳ ಕೀಟ/ ರೋಗದ ಸಮೀಕ್ಷೆ ನಡೆಸಿ ಹತೋಟಿ ಕ್ರಮಗಳ ಬಗ್ಗೆ ಕ್ಷೇತ್ರಮಟ್ಟದಲ್ಲೇ ಪರಿಹಾರ ಕಂಡುಕೊಳ್ಳಲಿದ್ದಾರೆ. ಎಂಟು ವಾರಗಳ ಕಾಲ ಈ ಸಮೀಕ್ಷೆ ನಡೆಯಲಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ರಿತೇಂದ್ರನಾಥ ಸುಗೂರ ಮಾಹಿತಿ ನೀಡಿದರು.

ಕಲಬುರ್ಗಿ-1ರ ಉಪ ಕೃಷಿ ನಿರ್ದೇಶಕಿ ಡಾ.ಅನುಸೂಯಾ, ಸೇಡಂ-2ರ ಉಪ ಕೃಷಿ ನಿರ್ದೇಶಕ ಡಾ.ಸಮದ್ ಪಟೇಲ್, ಕೃಷಿ ವಿಜ್ಞಾನಿಗಳಾದ ಡಾ.ಎಂ.ಎಂ. ಧನಂಜಿ, ಡಾ.ರಾಜು ತೆಗ್ಗಳ್ಳಿ, ಡಾ.ರಾಚಪ್ಪ ಹಾವೇರಿ, ಸಹಾಯಕ ಕೃಷಿ ನಿರ್ದೇಶಕಿ ಡಾ.ಮಧುಮತಿ ಪಾಟೀಲ, ಅಫಜಲಪುರ, ಆಳಂದ, ಚಿಂಚೋಳಿ, ಚಿತ್ತಾಪುರ, ಕಲಬುರ್ಗಿ, ಜೇವರ್ಗಿ ಹಾಗೂ ಸೇಡಂ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ಕ್ಷೇತ್ರ ಮಟ್ಟದ ಅಧಿಕಾರಿಗಳು, ಕೃಷಿ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT