ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳಂದ: ಬಿಇಒ ಕಚೇರಿ ಆವರಣದಲ್ಲಿ ಮದ್ಯ ಸೇವನೆ, ಕ್ರಮಕ್ಕೆ ಮನವಿ

ಆಳಂದ ಬಿಇಒ ಕಚೇರಿ ಮುಂದೆ ಕಿಡಿಗೇಡಿಗಳಿಂದ ಮದ್ಯಸೇವನೆ
Last Updated 31 ಡಿಸೆಂಬರ್ 2021, 5:11 IST
ಅಕ್ಷರ ಗಾತ್ರ

ಆಳಂದ: ಪಟ್ಟಣದ ಗುರುಭವನದ ಆವರಣದಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಮಂಗಳವಾರ ರಾತ್ರಿ ಕಿಡಿಗೇಡಿಗಳು ಮದ್ಯಸೇವನೆ ಮಾಡಿ, ಬಾಟಲ್ ಮತ್ತಿತರ ತ್ಯಾಜ್ಯವನ್ನು ಎಸೆದು ಹೋಗಿದ್ದಾರೆ.

ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿಬ್ಬಂದಿ, ಶಿಕ್ಷಕರ ಸಂಘದಿಂದ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಅವರನ್ನು ಕರೆಯಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.

ಗುರುಭವನ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಕಿಡಿಗೇಡಿಗಳು ಸಂಜೆಯಾದ ನಂತರ ಇಸ್ಪೀಟ್, ಮದ್ಯಸೇವನೆ ಮತ್ತಿತರ ಅಕ್ರಮ ಕೆಲಸಗಳನ್ನು ಮಾಡುತ್ತಾರೆ. ಆವರಣದಲ್ಲಿ ಸೂಕ್ತ ವಿದ್ಯುತ್ ವ್ಯವಸ್ಥೆ ಹಾಗೂ ತಡೆಗೋಡೆ ಇಲ್ಲದ ಕಾರಣ ರಾತ್ರಿ ಸಮಯದಲ್ಲಿ ಮದ್ಯಸೇವನೆಯ ಕಾಯಂ ತಾಣದಂತೆ ಬಳಕೆ ಮಾಡುತ್ತಿದ್ದಾರೆ ಎಂದು ಶಿಕ್ಷಕರ ಸಂಘದ ಪ್ರಭಾರಿ ಅಧ್ಯಕ್ಷ ಮನಸೂರ್ ಮುಜಾವರ್ ಆರೋಪಿಸಿದರು.

ಪುರಸಭೆಯು ಸ್ವಚ್ಛತೆ ಕಾರ್ಯ ಕೈಗೊಳ್ಳುವ ಜತೆಗೆ ಸಿಸಿ ಕ್ಯಾಮರಾ ಅಳವಡಿಕೆ ಮತ್ತು ಪೊಲೀಸ್ ಗಸ್ತು ಮೂಲಕ ಕಿಡಿಗೇಡಿ ಕೃತ್ಯ ತಡೆಯಲು ಮನವಿ ಮಾಡಿದರು.

ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಶಿಕ್ಷಕರ ಮನವಿ ಸ್ವೀಕರಿಸಿ 'ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿ ಸೂಕ್ತ ಕ್ರಮ, ಎಚ್ಚರವಹಿಸಲು ಸೂಚಿಸುತ್ತೆನೆ’ ಎಂದು ಭರವಸೆ ನೀಡಿದರು. ಶಿಕ್ಷಕರ ಸಂಘದ ಸದಸ್ಯರಾದ ಕಲ್ಯಾಣಪ್ಪ ಬಿಜ್ಜರಗಿ, ಹೋರಾಟಗಾರ ಮೌಲಾ ಮುಲ್ಲಾ, ಮೈಲಾರಿ ಜೋಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT