ಆಳಂದ: ‘ಪ್ರಸ್ತುತ ಒತ್ತಡದ ಬದುಕಿನಿಂದ ಪ್ರತಿಯೊಬ್ಬರೂ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ, ಇದಕ್ಕೆ ಸಂಗೀತ, ಸಾಹಿತ್ಯಾಭಿರುಚಿ ಬೆಳೆಸುವ ಕಲೆಗಳಿಂದ ಮಾತ್ರ ನೆಮ್ಮದಿ ಸಿಗಲಿದೆ’ ಎಂದು ಆಳಂದ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶರಣಬಸಪ್ಪ ಕೊಡ್ಲಾ ತಿಳಿಸಿದರು.

ಪಟ್ಟಣದ ಶರಣ ಏಕಾಂತರಾಮಯ್ಯ ಅನುಭವ ಮಂಟಪದಲ್ಲಿ ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೀರಭದ್ರೇಶ್ವರ ಸಾಂಸ್ಕೃತಿಕ ಹಾಗೂ ಕ್ರೀಡಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಆಳಂದದಿಂದ ಏರ್ಪಡಿಸಿದ ಸಾಂಸ್ಕೃತಿಕ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ ಜನಪದವು ಕಲೆ ಮಾತ್ರವಾಗಿಲ್ಲ, ಅದು ನಮ್ಮ ಸಂಸ್ಕೃತಿಯಾಗಿದ್ದು, ಪರಂಪರಾಗತವಾದ ಹಬ್ಬ, ಆಚರಣೆ, ಕೃಷಿ, ಕಾಯಕ, ಕತೆ, ಕಾವ್ಯ, ಸಂಗೀತ ಕಲೆಗಳ ಮೂಲವಾಗಿರುವ ಜನಪದವು ಮೌಲ್ಯಯುತವಾಗಿದೆ’ ಎಂದು ಹೇಳಿದರು.

ಬಾಬುರಾವ ಮಡ್ಡೆ, ಶಿವಲಿಂಗ ತೇಲ್ಕರ್ ಸಂಸ್ಥೆ ಉಪಾಧ್ಯಕ್ಷ ಶಿವಾನಂದ ಎಸ್ ಮಾತನಾಡಿದರು. ಜ್ಯೋತಿ ಎಸ್ ಮಡ್ಡೆ ಅಧ್ಯಕ್ಷತೆವಹಿಸಿದರು. ನಿರಾಕಾರ ಸ್ವಾಮೀಜಿ, ಶಿವಶರಣಯ್ಯ ಸ್ವಾಮಿ ಖಂಡಾಳ, ಪ್ರಕಾಶ ಜಂಗಲೆ, ಪ್ರಭು ಪಾಟೀಲ, ಸಿದ್ದರಾಮ ಕೊಚಡೆ, ಸುರೇಶ ಮಡ್ಡೆ ಉಪಸ್ಥಿತರಿದ್ದರು.

ಕಲಾವಿದರಾದ ಬಸಯ್ಯ ಗುತ್ತೇದಾರ, ಶ್ರೀಶೈಲ ಕೊಂಡದ, ಸೈದಪ್ಪ ಸಪ್ಪನಗೋಳ, ಮಲ್ಲಿಕಾರ್ಜುನ ದೊಡ್ಡಿ, ಬಸವರಾಜ ಆಳಂದ, ವಿಜಯಕುಮಾರ ಅವರು ಜನಪದ ಹಾಡು, ತತ್ವಪದ ಗಾಯನ, ಸುಗಮ ಸಂಗೀತ ಹಾಗೂ ಭಕ್ತಿಗೀತೆಗಳ ಹಾಡುವ ಮೂಲಕ ರಂಜಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-31-1036287561

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.