ಆಳಂದ: ‘ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಸಮ ಸಮಾಜ ಕಟ್ಟುವ ಚಿಂತನೆಗಳನ್ನು ಪ್ರತಿಯೊಬ್ಬರು ಆಚರಣೆಗೆ ತರಬೇಕಿದೆ’ ಎಂದು ರಾಜ್ಯಸಭಾ ಸದಸ್ಯೆ ಜ್ಯೋತಿ ವಾಘ್ಮೋರೆ ತಿಳಿಸಿದರು.

ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಬುಧವಾರ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಬೇಡ್ಕರ್ ಅವರು ಆಧುನಿಕ ಭಾರತದ ನಿಮಾತೃ. ಈ ದೇಶದ ಕೃಷಿ, ನೀರಾವರಿ, ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಶೋಷಿತರ, ಕಾರ್ಮಿಕರ ಹಾಗೂ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಮಹನೀಯರು. ಅವರ ಆಶಯದಂತೆ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಬಲಿಷ್ಠಗೊಳಿಸಿ’ ಎಂದರು.

ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ‘ಅಂಬೇಡ್ಕರ್ ಅವರು ಜಾತಿ ತಾರತಮ್ಯಗಳಿಂದ ಹಲವು ಸಂಕಷ್ಟಗಳನ್ನು ಎದುರಿಸಿದ್ದರು. ಆದರೆ, ಅವರಲ್ಲಿ ಜನರ ಬದುಕಿನಲ್ಲಿ ಬದಲಾವಣೆ ತರಲು ಸತತ ಅಧ್ಯಯನ ಕೈಗೊಂಡು ಶ್ರೇಷ್ಠ ಸಂವಿಧಾನ ನೀಡಿದ್ದಾರೆ’ ಎಂದರು.

ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ, ಹೋರಾಟಗಾರ ಹಣಮಂತ ಯಳಸಂಗಿ, ಮಹೇಶ ಗೌಳಿ ಮಾತನಾಡಿ, ಆಳಂದ ಪಟ್ಟಣದಲ್ಲಿ ಎಲ್ಲರೂ ಒಗ್ಗೂಡಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿರುವದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೀದರ್ನ ವರಜ್ಯೋತಿ ಥೋರೋ ಬಂತೇಜೀ ಸಾನ್ನಿಧ್ಯ ವಹಿಸಿದ್ದರು. ನಿರಗುಡಿಯ ಹವಾ ಮಲ್ಲಿನಾಥ ಮಹಾರಾಜರು ಉಪಸ್ಥಿತರಿದ್ದರು. ಪಾಂಡುರಂಗ ಮೊದಲೆ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ಪ್ರಬುದ್ದ. ಆರ್. ಪಾಟೀಲ, ರೇವಣಸಿದ್ದಪ್ಪ ನಾಗೂರೆ, ಸಿ.ಕೆ. ಪಾಟೀಲ, ಸುಭಾಷ ತೋಳೆ, ಜಗದೀಶ ಬಿರಾದಾರ, ಗುಂಡು ಗೌಳಿ, ಮಹಾದೇವ ಮೋಘಾ, ಶ್ರೀಶೈಲ ಸುತಾರ, ಶಿವಪುತ್ರ ನಡಗೇರಿ, ಸೂರ್ಯಕಾಂತ ಸಾಲೇಗಾಂವ, ಗಂಗಾರಾಮ ಮೊದಗುಲೆ, ಲಕ್ಷ್ಮಣ ಝಳಕಿ, ದಯಾನಂದ ಸಾಲೇಗಾಂವ, ನಾಗರಾಜ ದೇವನೂರು, ಮುತ್ತಣ್ಣ ಜಂಗಲೆ, ಸಂತೋಷ ಸಿಂಧೆ, ಸತೀಶ ಪನಶೆಟ್ಟಿ, ಸುನೀಲ ಹಿರೋಳ್ಳಿ, ರಾಜಕುಮಾರ ಮುದಗುಲೆ, ಶಿವು ಮರಡಿ, ದಿಲೀಪ ಕ್ಷೀರಸಾಗರ ಉಪಸ್ಥಿತರಿದ್ದರು.

ಸುಧಾರಾಣಿ ನಿರೂಪಿಸಿದರು. ಅವಿನಾಶ ದೇವನೂರು ಸ್ವಾಗತಿಸಿದರು. ರಾಘವೇಂದ್ರ ಕಣಮಸ ವಂದಿಸಿದರು. ಕಲಾವಿದ ಸಿದ್ದಾರ್ಥ ಚಿಮ್ಮ ಇದಲಾಯಿ, ಮೋಘಾ ಚಿಚಕೋಟೆ ಅವರ ತಂಡದಿಂದ ಭೀಮಗೀತೆಗಳ ಗಾಯನ ಮನ ಸೆಳೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-31-418452192

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.