ಆಳಂದ: ‘ಸರ್ಕಾರವು ಗ್ರಾಮೀಣ ಭಾಗದ ವಸತಿ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ಸೌಲಭ್ಯಗಳು ಒದುಗಿಸುತ್ತಿದ್ದು, ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಶಾಸಕ ಬಿ.ಆರ್.ಪಾಟೀಲ ಹೇಳಿದರು.

ತಾಲ್ಲೂಕಿನ ಸಾವಳೇಶ್ವರ ಗ್ರಾಮದಲ್ಲಿ ₹ 1 ಕೋಟಿ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಂಪರ್ಕ ಕಲ್ಪಿಸುವ ಸಿಸಿರಸ್ತೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನೆರ ವೇರಿಸಿ ಅವರು ಮಾತನಾಡಿದರು.

‘ಆಳಂದ ಮುಖ್ಯರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ₹13.30 ಕೋಟಿ ಅನುದಾನ ಬಂದಿದೆ. ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಲು ತಿಳಿಸಿಲಾಗಿದೆ’ ಎಂದು ತಿಳಿಸಿದರು.

ಈ ವೇಳೆ ಮುಖಂಡರಾದ ಯಶ್ವಂತ ಪೂಜಾರಿ, ಹಜರತ್ ಪಟೇಲ್, ಶ್ರೀಶೈಲ ಹತ್ತರಕಿ, ಕಲ್ಲಪ್ಪ ಸಾವಳೇಶ್ವರ, ಚಂದ್ರಕಾಂತ ಘೋಡಕೆ, ಸೂರ್ಯಕಾಂತ ಗಾಯಕವಾಡ, ಸಾತಲಿಂಗಪ್ಪ ಪಾಟೀಲ, ಶ್ರೀಕಾಂತ ಸಿನ್ನೂರು, ಅಜೀಮ ಸಗರಿ, ಅಪ್ಪಾಸಾಬ ಪಾಟೀಲ, ಸೂರ್ಯಕಾಂತ ಪಡಶೆಟ್ಟಿ, ಚೆನ್ನಪ್ಪ ಹತ್ತರಕಿ, ಕಲ್ಲಪ್ಪ ಹತ್ತರಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ: ಪಟ್ಟಣದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ವತಿಯಿಂದ ಡಿಎಂಎಫ್ ಅನುದಾನದಡಿ ಮಂಜೂರಾದ ಅರ್ಹ ಅಂಗವಿಕಲ 28 ಜನ ಫಲಾನುಭವಿಗಳಿಗೆ ತ್ರಿಚಕ್ರ ವಾಹನವನ್ನು ಶಾಸಕ ಬಿ.ಆರ್.ಪಾಟೀಲ ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಶಿವಪುತ್ರಪ್ಪ ಪಾಟೀಲ ಮುನ್ನೋಳ್ಳಿ, ಪ್ರತಾಪ ಕುಲಕರ್ಣಿ, ಲಿಂಗರಾಜ ಜಾನೆ, ವಿಶ್ವನಾಥ ಧರ್ಮವಾಡಿ, ಶಿವರಾಯ ಪೂಜಾರಿ, ರಾಜಕುಮಾರ ಮುಲಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-31-1895187382

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.