ಆಳಂದ: ಪಟ್ಟಣದ ಮಟಕಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ತಾಲ್ಲೂಕು ಕ್ರೀಡಾಂಗಣವು ಕನಿಷ್ಠಮಟ್ಟದ ಕ್ರೀಡಾ ಸೌಲಭ್ಯಗಳು ಇಲ್ಲದೇ ಅವ್ಯವಸ್ಥೆಗಳ ಆಗರವಾಗಿದೆ. ಇದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಪಟ್ಟಣದ ಆಸಕ್ತ ಕ್ರೀಡಾಪಟುಗಳ ಆಟೋ ಟದ ಹವ್ಯಾಸಕ್ಕೆ ನಿರಾಸೆ ಮೂಡಿಸಿದೆ.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅನುದಾನದಲ್ಲಿ 8 ಎಕರೆ ಜಮೀನಿನಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿದೆ. ನಿರ್ಮಾಣವಾಗಿ 12 ವರ್ಷಗಳಾದರೂ ಕ್ರೀಡಾಂಗಣಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಈವರಗೆ ಸಾಧ್ಯವಾಗಿಲ್ಲ. ಒಳಾಂಗಣ ಕ್ರೀಡೆ ಮತ್ತು ಹೊರಾಂಗಣ ಕ್ರೀಡೆಗಳ ವ್ಯವಸ್ಥೆಯುಳ್ಳ ಇಲ್ಲಿಯ ಕ್ರೀಡಾಂಗಣದಲ್ಲಿ ಸುತ್ತಲಿನ ಕಾಂಪೌಂಡ್ ನಿರ್ಮಾಣ ಸಹ ಅಪೂರ್ಣವಾಗಿದೆ.

ಹಳೆಯ ಮೂರು ಕೋಣೆಗಳ ಕಟ್ಟಡ ಮತ್ತು ಸಭಾಂಗಣವು ಸಂಪೂರ್ಣ ಹಾಳಾಗಿದ್ದು, ಸಂಜೆಯಾದರೆ ಸಾಕು ಮದ್ಯಸೇವನೆ, ಸಿಗರೇಟ್ ಮತ್ತಿತರ ದುಶ್ಚಟಗಳ ಅಡ್ಡೆಯಾಗಿ ಪರಿವರ್ತನೆಯಾಗಿದೆ. ಹಳೆಯ ಕಟ್ಟಡದ ಒಳಗೆ, ಮೇಲೆ ಹಾಗೂ ಮೈದಾನದ ಮೂಲೆ ಮೂಲೆಗೂ ಮದ್ಯದ ಬಾಟಲಿ, ಸಿಗರೇಟ್ ಡಬ್ಬಿ, ತಿಂಡಿ ತಿನಿಸುಗಳ ಪ್ಲಾಸ್ಟಿಕ್ ಕವರ್ ಮತ್ತಿತರ ತ್ಯಾಜ್ಯ ಎಲ್ಲೆಂದರಲ್ಲಿ ಬಿಸಾಡಲಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಅನುದಾನದಲ್ಲಿ ₹16 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ ಕಟ್ಟಿಗೆ, ಕಬ್ಬಿಣ ಮತ್ತಿತರ ಕಟ್ಟಡ ಸಾಮಗ್ರಿ ಸಂಗ್ರಹಿಸಿ ಬೀಗ ಜಡಿಯಲಾಗಿದೆ. ಹೀಗಾಗಿ ಶೌಚಾಲಯ ಕಟ್ಟಡವು ಬಳಕೆ ಇಲ್ಲ. ಸಮೀಪದಲ್ಲಿ ಬೋರ್ವೆಲ್ ಹಾಕಿದ್ದು, ಅದಕ್ಕೆ ನೀರು ಲಭ್ಯವಾದರೂ ನೀರಿನ ಬಳಕೆಯೇ ಇಲ್ಲ. ವಿದ್ಯುತ್ ಕಂಬ, ಮೋಟರ್, ಪೈಪ್ ಲೈನ್, ನೀರಿನ ಟ್ಯಾಂಕ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಯಾವದೂ ಇಲ್ಲ. ಹೊಸದಾಗಿ ಮುಖ್ಯಗೇಟ್, ಕ್ರೀಡಾಂಗಣದ ಗ್ಯಾಲರಿ ನಿರ್ಮಾಣ ಕಾಮಗಾರಿ ಆರಂಭವಾಗಿ ನಾಲ್ಕು ವರ್ಷ ಗತಿಸಿದರೂ ಕಾಮಗಾರಿ ಮಾತ್ರ ಅಪೂರ್ಣವಾಗಿದೆ.

ಕ್ರೀಡಾಂಗಣದ ಒಳಗೆ ಮೈದಾನದಲ್ಲಿ ಸಮತಟ್ಟು ಕಾರ್ಯವೂ ಕೈಗೊಂಡಿಲ್ಲ. ಹವ್ಯಾಸಿ ಯುವಕರು ಮಾತ್ರ ಕ್ರಿಕೆಟ್ ಆಟಕ್ಕಾಗಿ ಇಲ್ಲಿಯ ಮೈದಾನ ಬಳಕೆಯಾಗುತ್ತಿದೆ. ವರ್ಷಕ್ಕೊಮ್ಮೆ ಶಾಲಾ ಹಂತದ ವಲಯಮಟ್ಟ ಮತ್ತು ತಾಲ್ಲೂಕು ಮಟ್ಟದ ಕ್ರೀಡಾಕೂಟಗಳು ಈ ಕ್ರೀಡಾಂಗಣದಲ್ಲಿ ನಡೆಸುವುದು ಸವಾಲಿನ ಕೆಲಸವಾಗಿದೆ. ಶಿಕ್ಷಣ ಇಲಾಖೆಯವರು ಖರ್ಚು ಮಾಡಿ ನೆಲಸಮಗೊಳಿಸುವುದು, ಮಣ್ಣುಹಾಕುವುದು ಸಾಮಾನ್ಯವಾಗಿದೆ. ವಾಲಿಬಾಲ್, ಥ್ರೋಬಾಲ್, ಕೊಕ್ಕೊ ಮತ್ತಿತರ ಆಟಗಳಿಗೆ ಅಗತ್ಯ ಸೌಕರ್ಯಗಳೇ ಇಲ್ಲ. ಅಲ್ಲದೆ ಅಥ್ಲೆಟಿಕ್ಸ್ ಆಟೋಟಗಳಿಗೆ ಸಮರ್ಪಕ ಟ್ರ್ಯಾಕ್ ಸಹ ಹಾಕಿಲ್ಲ. ಸಾಮಗ್ರಿಗಳು ಇಲ್ಲದೆ ಶಾಲೆಗಳಿಂದ ವಿದ್ಯಾರ್ಥಿಗಳೇ ಕ್ರೀಡಾ ಸಾಮಾನು ತಂದು ಆಟವಾಡುವ ದುಸ್ಥಿತಿ ಇದೆ.

ಬೆಳಿಗ್ಗೆ, ಸಂಜೆ ಹೊತ್ತಿನಲ್ಲಿ ವೃದ್ಧರು, ವಾಯುವಿಹಾರಕ್ಕೆ ಆಗಮಿಸಲು ಆತಂಕ ಪಡುವ ಪರಿಸ್ಥಿತಿ ಇದೆ. ವಿಶಾಲವಾದ ಮೈದಾನದಲ್ಲಿ ಎಲ್ಲಿಯೂ ವಿದ್ಯುತ್ ಬೆಳಕಿನ ವ್ಯವಸ್ಥೆ ಕಾಣುವದಿಲ್ಲ. ಅಲ್ಲದೆ ಮಳೆ ಬಂದರೆ ಅಲ್ಲಲ್ಲಿ ನೀರು ನಿಂತು ಕೆಸರುಗದ್ದೆಯಾಗಿ ಮೈದಾನ ಪರಿವರ್ತನೆಯಾಗುತ್ತದೆ.

ಪಟ್ಟಣದಲ್ಲಿನ ವಸತಿ ನಿಲಯಗಳಲ್ಲಿರುವ ಯುವ ವಿದ್ಯಾರ್ಥಿಗಳು, ಯುವಕರು ವಿವಿಧ ಪೋಲಿಸ್ , ಅಗ್ನಿವೀರ, ಭಾರತೀಯ ಸೇನೆ ಆಕಾಂಕ್ಷಿಗಳು ಕ್ರಿಡಾಂಗಣದಲ್ಲಿ ಅಗತ್ಯ ತಾಲೀಮು, ಸಿದ್ಧತೆಗಾಗಿ ವಾತಾವರಣ ಮತ್ತು ಸೌಕರ್ಯಗಳು ಇಲ್ಲದ ಕಾರಣ ಪಟ್ಟಣದ ಮುಖ್ಯರಸ್ತೆ ಮೇಲೆ ಓಟ, ವ್ಯಾಯಾಮ, ಯೋಗ ಮಾಡುವಂತಾಗಿದೆ.

ಕ್ರೀಡಾಂಗಣದಲ್ಲಿ ಒಳಾಂಗಣ ಕ್ರೀಡೆಗಳಾದ ಷಟಲ್ ಬ್ಯಾಡ್ಮಿಂಟನ್, ಹ್ಯಾಂಡ್ಬಾಲ್, ಟೇಬಲ್ ಟೆನಿಸ್, ಕುಸ್ತಿ, ಕ್ಯಾರಂ ಆಟಗಳನ್ನು ತಾಲ್ಲೂಕು ಮಟ್ಟದಲ್ಲಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಇಂತಹ ಆಟ ಮರೀಚಿಕೆಯಾಗಿದೆ. ಅಲ್ಲದೇ ಹೊರಾಂಗಣ ಕ್ರೀಡೆಗಳಾದ ಕಬಡ್ಡಿ, ಕೊಕ್ಕೊ, ವಾಲಿಬಾಲ್, ಕ್ರಿಕೆಟ್, ಎತ್ತರ ಜಿಗಿತ, ಉದ್ದ ಜಿಗಿತದ ಅಂಕಣಗಳು ಇಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-34-1958495531

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.