ಆಳಂದ: ‘ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯುಳ್ಳ ಸ್ಥಳಕ್ಕೆ ತಕ್ಷಣ ಭೇಟಿ ನೀಡಿ ಸಮಸ್ಯೆಗೆ ಸ್ಪಂದಿಸಬೇಕು’ ಎಂದು ರಾಜ್ಯ ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ತಿಳಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕುಡಿಯುವ ನೀರಿನ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮುಂಬರುವ ಮುಂಗಾರು ಮಳೆಯು ಜೂನ್ನಲ್ಲಿ ವಿಳಂಬವಾಗಲಿದೆ. ಇದರಿಂದ ಮೂರು ತಿಂಗಳು ನೀರಿನ ಸಮಸ್ಯೆ ಎದುರಾಗಲಿದೆ. ಕೊಳವೆಬಾವಿ, ತೆರೆದಬಾವಿ ಹೂಳೆತ್ತುವುದು ಹಾಗೂ ಖಾಸಗಿ ಬಾವಿಗಳಿಂದ ಒಪ್ಪಂದದ ಆಧಾರದಲ್ಲಿ ನೀರು ಪಡೆಯುವ ವ್ಯವಸ್ಥೆ ತಕ್ಷಣ ಆರಂಭಿಸಬೇಕು’ ಎಂದು ತಿಳಿಸಿದರು.

‘ಗ್ರಾಮದ ಸಮಸ್ಯೆಗಳಿಗೆ ಪಿಡಿಒಗಳು ಸೂಕ್ತವಾಗಿ ಸ್ಪಂದಿಸುವುದಿಲ್ಲ. ಸಂಪರ್ಕಕ್ಕೆ ಸಿಗುವದಿಲ್ಲ. ಕರೆಗೆ ಉತ್ತರಿಸುವುದಿಲ್ಲ ಎಂದು ಗ್ರಾಮಸ್ಥರಿಂದ ದೂರುಗಳು ಬರುತ್ತಿವೆ. ಬೇಜವಾಬ್ದಾರಿಯಿಂದ ವರ್ತಿಸುವ ಪಿಡಿಒಗಳ ವಿರುದ್ಧ ತಾ.ಪಂ ಇಒ ಅವರು ಕ್ರಮ ಜರುಗಿಸಬೇಕು. ನಿಮಗೆ ಪಿಡಿಒಗಳ ಮೇಲೆ ನಿಯಂತ್ರಣ ಇಲ್ಲದಾಗಿದೆ. ನಿರ್ಲಕ್ಷ್ಯದಿಂದ ನೀರಿನ ಸಮಸ್ಯೆಯಾದರೆ ಪಿಡಿಒ ಹಾಗೂ ಇಒ ಅವರೇ ಹೊಣೆಗಾರರು’ ಎಂದು ಅಧಿಕಾರಿಗಳಿಗೆ ಬಿಸಿಮುಟ್ಟಿಸಿದರು.

ತಾ.ಪಂ ಇಒ ಮಾನಪ್ಪ ಕಟ್ಟಿಮನಿ ಸಭೆಗೆ ಮಾಹಿತಿ ನೀಡಿ, ‘ನೀರಿನ ಸಮಸ್ಯೆ ಉಲ್ಬಣಿಸಿದ ಜೀರಹಳ್ಳಿ, ಜೀರಹಳ್ಳಿ ತಾಂಡಾ, ಚಿಂಚೋಳಿ ಕೆ., ಜವಳಗಾ, ಶಿರೂರು, ಹೊದಲೂರು, ಹಾಳತಡಕಲ, ಝಳಕಿ, ಕವಲಗಾ ಸೇರಿದಂತೆ 14 ಗ್ರಾಮಗಳಲ್ಲಿ ಮುಂಜಾಗ್ರತೆ ಕ್ರಮವಹಿಸಲಾಗಿದೆ’ ಎಂದು ತಿಳಿಸಿದರು.

ಕರವಸೂಲಿ ಹೆಚ್ಚಿಸಿರಿ: ತಾಲ್ಲೂಕಿನ 42 ಗ್ರಾ.ಪಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರವಸೂಲಿ ಕೈಗೊಳ್ಳಬೇಕು. ಗ್ರಾಮಗಳಲ್ಲಿ ಅಗತ್ಯ ಮೂಲಸೌಕರ್ಯ ಒದುಗಿಸಲು ಅನುದಾನದ ಕೊರತೆಯಿದೆ. ಪಿಡಿಒಗಳು ಜಾಗೃತಿ ಅಭಿಯಾನ ಮತ್ತು ಮನೆಗಳಿಗೆ ಭೇಟಿ ನೀಡಿ ಕರವಸೂಲಿ ಶೇ 100ರಷ್ಟು ಕೈಗೊಳ್ಳಬೇಕು ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಹಡಲಗಿ, ಹೆಬಳಿ, ಜಿಡಗಾ, ಹಿತ್ತಲ ಶಿರೂರು ಗ್ರಾ.ಪಂ.ಗಳಲ್ಲಿ ಶೇ 50ಕ್ಕಿಂತ ಕರವಸೂಲಿ ಆಗಿದೆ. ಅಧಿಕ ಕರವಸೂಲಿ ಮಾಡಿದ ಪಂಚಾಯಿತಿಗಳಿಗೆ ಬಹುಮಾನ ನೀಡುವ ಮೂಲಕ ಪ್ರೋತ್ಸಾಹ ನೀಡಲಾಗಿದೆ ಎಂದು ಇಒ ಮಾನಪ್ಪ ತಿಳಿಸಿದರು.

ತಹಶೀಲ್ದಾರ್ ಅಣ್ಣರಾವ ಪಾಟೀಲ, ಪಂಚಗ್ಯಾರಂಟಿ ತಾಲ್ಲೂಕು ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಸಿಪಿಐ ಜಗದೀಶ, ಪಿಐ ಶರಣಬಸಪ್ಪ ಕೊಡ್ಲಾ, ಯಲ್ಲಪ್ಪ ಇಂಗಳೆ, ಎಇಇ ಸಂಗಮೇಶ ಬಿರಾದಾರ ಹಾಗೂ ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-31-1728643375

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.