ಆಳಂದ: ಪಟ್ಟಣದಲ್ಲಿ ಎಲ್ಪಿಜಿ ಸಿಲಿಂಡರ್ಗಾಗಿ ದಿನವಿಡೀ ಕುಟುಂಬ ಸದಸ್ಯರು ಉರಿ ಬಿಸಿಲನ್ನೂ ಲೆಕ್ಕಿಸದೇ ಸರದಿ ಸಾಲಿನಲ್ಲಿ ನಿಂತು ಗ್ಯಾಸ್ಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವಾರದಿಂದ ಪಟ್ಟಣದ ನಿವಾಸಿಗಳು ಹಾಗೂ ಸುತ್ತಲಿನ ಗ್ರಾಮಸ್ಥರು ಆಳಂದ ಪಟ್ಟಣದ ಹೊರವಲಯದ ಸೋನಾ ಗ್ಯಾಸ್ ಏಜೆನ್ಸಿ ಗೋದಾಮು ಎದುರು ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯಗಳು ಕಾಣುತ್ತಿದೆ.

ಬುಧವಾರ ನಸುಕಿನ ಜಾವದಲ್ಲಿಯೇ ವಾಹನಗಳ ಮೇಲೆ ಖಾಲಿ ಸಿಲಿಂಡರ್ ಹೊತ್ತು ತಂದು ಗೋದಾಮಿಗೆ ಆಗಮಿಸಿ ಗಂಟೆಗಟ್ಟಲೇ ನಿಂತರೂ ತುಂಬಿದ ಸಿಲಿಂಡರ್ ದಕ್ಕಿದ್ದು ಕೆಲವರಿಗೆ ಮಾತ್ರ. ಇದರಿಂದ ದೂರದಿಂದ ಆಟೊ, ಬೈಕ್, ಸೈಕಲ್ ಮೇಲೆ ಖಾಲಿ ಸಿಲಿಂಡರ್ ಹೊತ್ತು ತಂದು ಕಾಯುತ್ತಿದ್ದ ಮಹಿಳೆಯರು ಸೋನಾ ಗ್ಯಾಸ್ ಏಜೆನ್ಸಿ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು.

ಪಟ್ಟಣದ ಸುಲ್ತಾನಪುರ, ಶ್ರೀರಾಮ ಮಾರುಕಟ್ಟೆ, ರೇವಣಸಿದ್ದೇಶ್ವರ ಕಾಲೊನಿ, ಶರಣನಗರ, ಅನ್ಸಾರಿ ಮೊಹಲ್ಲಾ, ಮಟಕಿರಸ್ತೆ ಮುಂತಾದ ಸ್ಥಳಗಳಲ್ಲಿ ಆಯಾ ವಾರ್ಡ್ ಮತ್ತು ಸಮೀಪದ ವಾರ್ಡ್ಗಳಲ್ಲಿ ಅಡುಗೆ ಅನಿಲ ವಿತರಣೆ ವ್ಯವಸ್ಥೆ ಇತ್ತು. ಆದರೆ ಕಳೆದ ಒಂದು ವಾರದಿಂದ ಪಟ್ಟಣದ ಯಾವ ವಾರ್ಡ್ನಲ್ಲಿಯೂ ಸಿಲಿಂಡರ್ ಸರಬುರಾಜು ಆಗುತ್ತಿಲ್ಲ. ಇದರಿಂದ ಜನರು ಸೋನಾ ಗ್ಯಾಸ್ ಏಜೆನ್ಸಿಯ ಗೋದಾಮಿನತ್ತ ಮುಖಮಾಡಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸರ ಸಮ್ಮುಖದಲ್ಲಿ ಸಿಲಿಂಡರ್ ವಿತರಣೆ ನಡೆಯಿತು. ಪಿಎಸ್ಐ ಸಂಜಯ ರೆಡ್ಡಿ, ಸಿಬ್ಬಂದಿ ಮಹಿಬೂಬ, ಶೇಖ್ ಮತ್ತಿತರರು ಸ್ಥಳದಲ್ಲಿ ಇದ್ದು ಪರಿಸ್ಥಿತಿ ಹತೋಟಿಗೆ ತಂದರು.

‘ಆಳಂದದಲ್ಲಿ ಗ್ಯಾಸ್ ವಿತರಣೆಯಲ್ಲಿ ಬಡ ಮತ್ತು ಕೂಲಿಕಾರ್ಮಿಕ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ. ಜಿಲ್ಲಾ ಆಹಾರ ಮತ್ತು ನಾಗರಿಕ ಸರಬುರಾಜು ಇಲಾಖೆ ಅಧಿಕಾರಿಗಳು ಇಂತಹ ಸಮಸ್ಯೆ ಎದುರಾದರೂ ಗ್ಯಾಸ್ ಏಜೆನ್ಸಿ ಮೇಲೆ ನಿಯಂತ್ರಣ ಇಲ್ಲ. ಸಮಸ್ಯೆಗೆ ಸ್ಪಂದಿಸುವವರು ಇಲ್ಲದಂತಾಗಿದೆ. ಇದರಿಂದ ನಮ್ಮಂತಹ ಅಸಹಾಯಕರಿಗೆ ಗ್ಯಾಸ್ ನೀಡುತ್ತಿಲ್ಲ’ ಎಂದು ಸಂಗಾ ಕಾಲೊನಿ ಮಹಿಳೆ ಚಂದಾಬಾಯಿ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-34-2078730638

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.