ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ನಡೆದಾಡಿದ ಪ್ರದೇಶಗಳ ಅಭಿವೃದ್ಧಿ- ನಾರಾಯಣಸ್ವಾಮಿ ಛಲುವಾದಿ

Last Updated 1 ಮೇ 2022, 4:01 IST
ಅಕ್ಷರ ಗಾತ್ರ

ವಾಡಿ: ಡಾ.ಬಿ.ಆರ್‌ ಅಂಬೇಡ್ಕರ್ ಅವರು ನಡೆದಾಡಿದ ಹಾಗೂ ತಂಗಿದ್ದ ಪ್ರದೇಶಗಳನ್ನು ಸ್ಮರಣೀಯಗೊಳಿಸಲು ರಾಜ್ಯ ಸರ್ಕಾರ ₹ 25 ಕೋಟಿ ಅನುದಾನ ಮೀಸಲಿಟ್ಟಿದೆ. ಅವುಗಳಲ್ಲಿ ವಾಡಿ ಪಟ್ಟಣವೂ ಸೇರಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಛಲುವಾದಿ ಹೇಳಿದರು.

ಪಟ್ಟಣಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ತಮ್ಮ ಜೀವತದ ಅವಧಿಯಲಿ ಕರ್ನಾಟಕದ ಹಲವು ಭಾಗಗಳಿಗೆ ಭೇಟಿ ನೀಡಿ, ಆ ಪ್ರದೇಶಗಳಿಗೆ ಮಹತ್ವ ತಂದುಕೊಟ್ಟಿದ್ದಾರೆ. ಅವುಗಳನ್ನು ಸ್ಮಾರಕ, ಭವನ, ಬೃಹತ್ ಗ್ರಂಥಾಲಯ ಮಾಡುವ ಯೋಜನೆ ಹಾಕಿಕೊಂಡಿದೆ. ಅದಕ್ಕಾಗಿ ಪ್ರಾರಂಭಿಕ ಅನುದಾನ ₹25 ಕೋಟಿ ಇರಿಸಿದೆ. ಅಗತ್ಯ ಇದ್ದರೇ ಹೆಚ್ಚಿನ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದಾರೆ ಎಂದರು.

ಬಿಜೆಪಿ ಮುಖಂಡರಾದ ಅಂಬಾರಾಯ ಅಷ್ಟಗಿ, ಶಿವರಾಂ ಪವಾರ್, ರಾಹುಲ ಸಿಂದಗಿ, ವಿಠ್ಠಲ ನಾಯಕ, ಗಿರಿಮಲ್ಲಪ್ಪ ಕಟ್ಟಿಮನಿ, ಹರಿ ಗಲಾಂಡೆ, ಅಂಬದಾಸ ಜಾಧವ, ಭಾಗವತ ಸುಳೆ, ವೀರಣ್ಣ ಯಾರಿ, ಶ್ರೀಕಾಂತ ಚವ್ಹಾಣ, ಸಿದ್ದಣ್ಣ ಕಲಶೆಟ್ಟಿ, ರವಿ ನಾಯಕ, ಅಂಬರೀಶ ಕುರುಕುಂಟಾ ಇದ್ದರು.

ಕಾಂಗ್ರೆಸ್ ಮುಖಂಡ ಘೇರಾವ: ಅಂಬೆಡ್ಕರ್ ವೃತ್ತದ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡು ವೇಳೆ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡ ಉದಯಕುಮಾರ, ಬಿಜೆಪಿ ಮುಖಂಡರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

‘ಮಲ್ಲಿಕಾರ್ಜುನ ಖರ್ಗೆ ಅವರ ಗರಡಿಯಲ್ಲಿ ಬೆಳೆದ ನೀವು (ನಾರಾಯಣಸ್ವಾಮಿ ಛಲುವಾದಿ, ಅಂಬರಾಯ ಅಷ್ಟಗಿ) ಈಗ ಖರ್ಗೆ, ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದೀರಿ‘ ಎಂದು ಆರೋಪಿಸಿದರು.ಈ ವೇಳೆ ಉಭಯ ಮುಖಂಡರ ನಡುವೆ ವಾಗ್ವಾದ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT