ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಹನ್ ಭಾಗವತ್ ಹೇಳಿಕೆ ನಾಚಿಕೆಗೇಡಿತನದ್ದು: ಘಂಟಿ

ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಟೀಕೆ
Last Updated 21 ಏಪ್ರಿಲ್ 2021, 5:28 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಕಲಬುರ್ಗಿ: ‘ಆಧುನಿಕತೆಯ ಈ ಕಾಲ
ದಲ್ಲಿ ಮಹಿಳೆ ಮನೆಯಲ್ಲಿಯೇ ಇದ್ದು ಕುಟುಂಬ ನಿರ್ವಹಣೆ ಮಾಡ
ಬೇಕು ಎನ್ನುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ನಾಚಿಕೆ
ಗೇಡಿತನದ್ದು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಟೀಕಿಸಿದರು.

ಗುಲಬರ್ಗಾ ವಿಶ್ವವಿದ್ಯಾನಿಲಯದ ಅಂಬೇಡ್ಕರ್ ಭವನದಲ್ಲಿ ಬಾಬಾ
ಸಾಹೇಬ ಡಾ.ಬಿ. ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮಹಿಳಾ ದಿನಾಚರಣೆ ಕಾರ್ಯ
ಕ್ರಮದಲ್ಲಿ ಪಾಲ್ಗೊಂಡಿದ್ದ ಭಾಗವತ್ ಮಹಿಳೆಯರನ್ನು ಈಗಲೂ ಕೀಳು ದೃಷ್ಟಿಕೋನದಿಂದ ನೋಡುತ್ತಿದ್ದಾರೆ. ಅದು ಮನು ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಭಾರತ ದೇಶವನ್ನು ಬುಲೆಟ್ ವೇಗದಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ರಾಜಕಾರಣಿಗಳು ಇಂದು ಸೂಪರ್ ಫಾಸ್ಟ್ ಆಗಿ ಅಭಿವೃದ್ಧಿ ಹೊಂದಿದ್ದಾರೆ. ಇಂಥವರೆಲ್ಲ ಡೋಂಗಿ ಮತ್ತು ಪುಂಗಿ ರಾಷ್ಟ್ರವಾದಿಗಳು’ ಎಂದು ಟೀಕಿಸಿದರು

‘ವೇದ ಆಗಮನ ಮಹಾ
ಕಾವ್ಯಗಳನ್ನು ಯಾರು ಬರೆದರು? ಕೊನೆಗೆ ಈ ಭಾರತಕ್ಕೆ ಸಂವಿಧಾನವನ್ನು ಯಾರು ಕೊಟ್ಟರು ಎಂಬುದನ್ನು ನೆನಪಿನಲ್ಲಿ
ಟ್ಟುಕೊಂಡು ಪ್ರಬುದ್ಧ ಭಾರತವನ್ನು ಕಟ್ಟ
ಬೇಕಾದ ಯುವಜನತೆ ಇಂದು ಕೆಲವು ಕುಹಕದ ಮತ್ತು ಡೋಂಗಿ ರಾಷ್ಟ್ರವಾದಿಗಳ ಮಾತು ಕೇಳಿ ದಾರಿ ತಪ್ಪುತ್ತಿದೆ. ಸಂವಿಧಾನದ ಮೀಸ
ಲಾತಿ ಹಾಗೂ ದೂರ ದೃಷ್ಟಿತ್ವದಿಂದ ಶಿಕ್ಷಣ ಪಡೆದ ನಾವು ಅವರ ಆಶಯ ಈಡೇರಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ಈ ಕುರಿತು ಆತ್ಮವಿಮರ್ಶೆ ಅಗತ್ಯ’ ಎಂದು ‌ಪ್ರತಿಪಾದಿಸಿದರು.

ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಮಾಡುವ ಸಂದರ್ಭದಲ್ಲಿ ಕಾಲಲ್ಲಿ ಚಪ್ಪಲಿ ಹಾಕಿಕೊಂಡಿದ್ದನ್ನು ಸಮ
ರ್ಥಿಸಿಕೊಂಡ ಘಂಟಿ, ‘ವೈದಿಕರ ಹಿತಾ
ಸಕ್ತಿ ವಿರೋಧಿಸುವ ನಿಟ್ಟಿನಲ್ಲಿ ನಾನು ಚಪ್ಪಲಿಗಳನ್ನು ಬಿಡಲಿಲ್ಲ. ಚಪ್ಪಲಿ ನನ್ನ ಸಮುದಾಯದ ಸಂಕೇತ. ನಾನು ಅದರ ಜೊತೆಯಲ್ಲಿಯೇ ಗೌರವದಿಂದ ಬಾಬಾ ಸಾಹೇಬರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದೇನೆ. ಯಾರೂ ಇದನ್ನು ಅನ್ಯಥಾ ಭಾವಿಸಬೇಡಿ, ದೊಡ್ಡ ವಿವಾದವನ್ನಾಗಿ ಮಾಡುವ ಅಗತ್ಯವೂ ಇಲ್ಲ’ ಎಂದರು.

ಎನ್‌ಎಸ್‌ಎಸ್ ಸಂಯೋಜ
ನಾಧಿಕಾರಿ ಪ್ರೊ. ರಮೇಶ ಲಂಡನಕರ್ ಬಹುಮಾನ ವಿತರಣೆ ನಡೆಸಿಕೊಟ್ಟರು. ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಎಚ್.ಟಿ.ಪೋತೆ ಅತಿಥಿ ಪರಿಚಯ ಮಾಡಿದರು. ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಪ್ರೊ. ಚಂದ್ರಕಾಂತ ಯಾತನೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಅಕಾಡೆಮಿಕೆ ಕೌನ್ಸಿಲ್ ಸದಸ್ಯ ಪ್ರೊ. ಬಾಬಣ್ಣ ಹೂವಿನಭಾವಿ, ಆಡಳಿತ ಕುಲಸಚಿವ ಶರಣಬಸಪ್ಪ ಕೋಟೆಪ್ಪ
ಗೋಳ್, ಬಿ. ವಿಜಯ ಇದ್ದರು. ವಿದ್ಯಾವಿಷಯಕ ಪರಿಷತ್ ಸದಸ್ಯ ಎನ್.ಎಸ್.ಹಿರೇಮಠ, ಪ್ರೊ. ರಾಜನಾಳಕರ್, ಪ್ರೊ. ಪಾಸೋಡಿ, ಡಾ. ಸೂರ್ಯಕಾಂತ ಸುಜ್ಯಾತ್, ಪ್ರಕಾಶ ಅತನೂರಕರ್, ಕೆ. ಸಿದ್ದಪ್ಪ, ಪ್ರೊ. ಶ್ರೀರಾಮುಲು, ಮುದಗಲ್ ವೆಂಕಟೇಶ, ಎಂ.ಬಿ. ನಡುವಿನಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT